ADVERTISEMENT

ವಿದೇಶಿ ಪ್ರಜೆಗಳಿಗೆ ಸಂಕಷ್ಟ: ಜಿಲ್ಲಾಡಳಿತ ನೆರವು

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 8:23 IST
Last Updated 28 ಜನವರಿ 2026, 8:23 IST
<div class="paragraphs"><p>ಬಾದಾಮಿ ಸಮೀಪದ ವಿಶ್ವಪರಂಪರೆ ತಾಣ ಪಟ್ಟದಕಲ್ಲು</p></div>

ಬಾದಾಮಿ ಸಮೀಪದ ವಿಶ್ವಪರಂಪರೆ ತಾಣ ಪಟ್ಟದಕಲ್ಲು

   

ಬಾದಾಮಿ: ಇಲ್ಲಿಯ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಬಂದು, ಸಂಕಷ್ಟಕ್ಕೆ ಸಿಲುಕಿದ ಇಬ್ಬರು ವಿದೇಶಿ ಪ್ರವಾಸಿಗರಿಗೆ ಜಿಲ್ಲಾಡಳಿತದ ಅಧಿಕಾರಿಗಳು ನೆರವಾದರು.

‘ಬಾದಾಮಿಯಲ್ಲಿ ಸ್ಮಾರಕಗಳ ವೀಕ್ಷಣೆ ವೇಳೆ ಪಾರ್ಶ್ವವಾಯುವಿಗೆ ಒಳಗಾದ ಫ್ರಾನ್ಸ್ ದೇಶದ ಇಝಾಕ್‌ ಗೋಲ್ಡ್‌ಬರ್ಗ್ ಅವರನ್ನು ಅಧಿಕಾರಿಗಳು ತಕ್ಷಣವೇ ಬಾದಾಮಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ನಂತರ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ಕೊಡಿಸಲು ಜಿಲ್ಲಾಧಿಕಾರಿ ಸಂಗಪ್ಪ ಕ್ರಮ ಕೈಗೊಂಡರು.

ADVERTISEMENT

‘ಬಾದಾಮಿ ಹೊರವಲಯದ ಬನಶಂಕರಿ ರಸ್ತೆ ಪಕ್ಕದಲ್ಲಿರುವ ರಂಗನಾಥ ದೇವಾಲಯದ ಬಳಿ ಹಗ್ಗದ ನೆರವಿನಿಂದ ಬೃಹತ್ ಬಂಡೆ ಹತ್ತುವ ವೇಳೆ ಕೆಳಗಡೆ ಬಿದ್ದು, ಅಮೆರಿಕಾದ ಎಲಿಸಾ ಎಂಬ ಮಹಿಳೆ ಗಾಯಗೊಂಡಿದ್ದಾರೆ. ಅವರು ಕಾಲು ಮತ್ತು ಬೆನ್ನಿಗೆ ತೀವ್ರ ಗಾಯಗಳಾಗಿವೆ. ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.