ADVERTISEMENT

ಜಾತಿ ಗಣತಿ ವೇಳೆ ಕ್ರಮ ಸಂಖ್ಯೆ 93 ಸಮಗಾರ ಎಂದು ನಮೂದಿಸಿ: ಶ್ರೀಧರ ಕಾಂಬಳೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 14:15 IST
Last Updated 5 ಮೇ 2025, 14:15 IST
ಕೆರೂರ ಪಟ್ಟಣದ ಅಂಬೇಡ್ಕರ ವೃತ್ತದ ಹತ್ತಿರವಿರುವ ಪರಿಶಿಷ್ಠ ಜಾತಿ ಕಾಲೋನಿಯಲ್ಲಿರುವ ಜನರಿಗೆ ಜಾತಿ ಗಣತಿ ವೇಳೆ ಕ್ರಮ ಸಂಖ್ಯೆ.93 ಸಮಗಾರ ಎಂದು ನಮೂದಿಸವಂತೆ ಬಿತ್ತಿ ಪತ್ರನೀಡಿ ಜಾಗೃತಿ ಮೂಡಿಸಲಾಯಿತು.
ಕೆರೂರ ಪಟ್ಟಣದ ಅಂಬೇಡ್ಕರ ವೃತ್ತದ ಹತ್ತಿರವಿರುವ ಪರಿಶಿಷ್ಠ ಜಾತಿ ಕಾಲೋನಿಯಲ್ಲಿರುವ ಜನರಿಗೆ ಜಾತಿ ಗಣತಿ ವೇಳೆ ಕ್ರಮ ಸಂಖ್ಯೆ.93 ಸಮಗಾರ ಎಂದು ನಮೂದಿಸವಂತೆ ಬಿತ್ತಿ ಪತ್ರನೀಡಿ ಜಾಗೃತಿ ಮೂಡಿಸಲಾಯಿತು.   

ಕೆರೂರ: ರಾಜ್ಯ ಸರ್ಕಾರದ ಆದೇಶದಂತೆ ಮೇ 5ರಿಂದ ಪರಿಶಿಷ್ಟ ಜಾತಿಗಳ ಗಣತಿ ಸಮೀಕ್ಷೆ ಆರಂಭಗೊಂಡಿದ್ದು, ಮನೆ ಮನೆಗೆ ಬರುವ ಅಧಿಕಾರಿಗಳು ಅರ್ಜಿಯಲ್ಲಿ ಕ್ರಮ ಸಂಖ್ಯೆ 93 ರಲ್ಲಿ ಸಮಗಾರ ಎಂದು ನಮೂದಿಸಬೇಕು ಎಂದು ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಶ್ರೀಧರ ಕಾಂಬಳೆ ಹೇಳಿದರು.

ಅವರು ಪಟ್ಟಣದ ಅಂಬೇಡ್ಕರ್‌ ವೃತ್ತದ ಹತ್ತಿರವಿರುವ ಪರಿಶಿಷ್ಟ ಜಾತಿ ಕಾಲೊನಿಯ ಜನರಿಗೆ ಮೂಲ ಜಾತಿಯ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.

‘ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಅವರ ಆಯೋಗದ ವರದಿಯಂತೆ ಜಾತಿ ಗಣತಿ ಸಮೀಕ್ಷೆ ನಡೆಯಲಿದ್ದು, ಸಮೀಕ್ಷೆ ವೇಳೆ ನಾವು ನೀಡುವ ನಿಖರ ಮಾಹಿತಿಯಿಂದ ಸಮಾಜದ ಅಂಕಿ ಅಂಶ ತಿಳಿಯಲಿದೆ. ರಾಜ್ಯ ಸರ್ಕಾರದಿಂದ ಶೈಕ್ಷಣಿಕ, ಉದ್ಯೋಗ, ರಾಜಕೀಯ ಸೇರಿದಂತೆ ಮೀಸಲಾತಿ ಪಡೆಯಲು ಅನುಕೂಲವಾಗುತ್ತದೆ’ ಎಂದು ಹೇಳಿದರು.

ADVERTISEMENT

ಸಮಾಜದ ಮುಖಂಡರಾದ ಸುರೇಶ ಕಾಂಬಳೆ, ಮುತ್ತಪ್ಪ ಚಿಟಗುಬ್ಬಿ, ಪ್ರಕಾಶ ಚಿಟಗುಬ್ಬಿ, ಸುನೀಲ್‌ ಕಾಂಬಳೆ, ನಿಂಗಪ್ಪ ಹೊಸಮನಿ, ಸಿ.ಎಂ. ಕಾಂಬಳೆ, ಸುನೀಲ್‌ ಮುಂಡೆವಾಡೆ, ಸತ್ಯಪ್ಪ ಕಾಂಬಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.