ರಬಕವಿ ಬನಹಟ್ಟಿಯಲ್ಲಿ ವಿವಿಕೆ ಫೌಂಡೇಷನ್ ಆಶ್ರಯದಲ್ಲಿ ನಾರಿಶಕ್ತಿ ಸಮಾವೇಶದಲ್ಲಿ ವೀಣಾ ಕಾಶಪ್ಪನವರ ಮಾತನಾಡಿದರು
ರಬಕವಿ ಬನಹಟ್ಟಿ: ‘ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ಮಹಿಳೆ ಆರ್ಥಿಕವಾಗಿ ಸಬಲಗೊಂಡು ಸ್ವಾಭಿಮಾನದ ಬದುಕನ್ನು ನಡೆಸುತ್ತಿದ್ದಾಳೆ’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ತಿಳಿಸಿದರು.
ಇಲ್ಲಿನ ಈಶ್ವರಲಿಂಗ ಮೈದಾನದಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಾರಿಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕುಟುಂಬದ ನಿರ್ವಹಣೆಗಾಗಿ ಮಹಿಳೆ ಸರ್ವ ತ್ಯಾಗ ಮಾಡುತ್ತಾಳೆ. ಅಂಥ ಮಹಿಳೆಗೆ ಸರ್ಕಾರ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವುದರ ಮೂಲಕ ಕುಟುಂಬ ನಿರ್ವಹಣೆಗೆ ಆಸರೆಯಾಗಿದೆ’ ಎಂದು ಅವರು ತಿಳಿಸಿದರು.
ಎಐಸಿಸಿ ವಕ್ತಾರ ಬೆಂಗಳೂರಿನ ಭವ್ಯ ನರಸಿಂಹಮೂರ್ತಿ ಮಾತನಾಡಿ, ‘ವೀಣಾ ಕಾಶಪ್ಪನವರು ಲೋಕಸಭೆಯ ಬಾಗಲಕೋಟೆ ಮತಕ್ಷೇತ್ರಕ್ಕೆ ಅಭ್ಯರ್ಥಿಯಾದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ಇಲ್ಲಿಯ ಮಹಿಳೆಯರ ಮೇಲಿದೆ’ ಎಂದರು.
ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ‍್ಣೂರ, ನೀಲಕಂಠ ಮುತ್ತೂರ ಮಾತನಾಡಿದರು.
ಮಹಿಳಾ ದಿನಾಚರಣೆ ಅಂಗವಾಗಿ ವೀಣಾ ಕಾಶಪ್ಪನವರ 1111 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಿ, ಮಹಿಳಾ ಸಾಧಕಿಯರನ್ನು ಸನ್ಮಾನಿಸಿದರು.
ರಾಜೇಂದ್ರ ಭದ್ರನವರ, ಭೀಮಶಿ ಮಗದುಮ್, ಮಹಾಲಿಂಗ ಮುಧೋಳ, ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ಶಂಕರ ಕೆಸರಗೊಪ್ಪ, ರಾಹುಲ ಕಲಾಲ, ಕವಿತಾ ಕೊಣ್ಣೂರ, ರೇಣುಕಾ ಮಡ್ಡಿಮನಿ, ವಿದ್ಯಾ ಬಿಳ್ಳೂರ, ಆಯೇಷಾ ಫನಿಬಂದ್, ಮಹಾನಂದ ಅಮರಾಪುರ, ಸಂಗಪ್ಪ ಕುಂದಗೋಳ, ಗೀತಾ ಕಾವೇರಿ, ಲಲಿತಾ ನಂದೆಪ್ಪನವರ, ಕಿರಣ ಕರಲಟ್ಟಿ, ನಾರಾಯಣ ನಿಕ್ಕಂ, ಸತ್ಯಪ್ಪ ಮಗದುಮ್, ಹಾರೂನ್ ಬೇವೂರ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.