ಬಾಗಲಕೋಟೆ: ‘ಯಾವುದಾದರೂ ಸಮಾಜಕ್ಕೆ ಅನ್ಯಾಯವಾಗುತ್ತದೆ ಎನ್ನುವುದಾದರೆ, ಎಚ್. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸರ್ಕಾರ ಬಿಡುಗಡೆ ಮಾಡಬಾರದು’ ಎಂದು ಶಿರಹಟ್ಟಿ– ಬಾಲೆಹೊಸೂರಿನ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದು ಸಮಾಜಕ್ಕೆ ಬೆಣ್ಣೆ, ಒಂದು ಸಮಾಜಕ್ಕೆ ಸುಣ್ಣ ಎಂಬುದು ವರದಿಯಲ್ಲಿ ಇರಬಾರದು’ ಎಂದು ಹೇಳಿದರು.
‘ವರದಿಯಲ್ಲಿ ಏನಿದೆ ಎಂಬುದು ನಮಗೂ ಗೊತ್ತಿಲ್ಲ. ವಿವಿಧ ಸಮಾಜದ ಮುಖಂಡರು ಅಭಿಪ್ರಾಯ ತಿಳಿಸಲು ಸ್ವತಂತ್ರರಾಗಿದ್ದಾರೆ. ಅವರ ಅಭಿಪ್ರಾಯ ಆಲಿಸುವ ಕೆಲಸ ಆಡಳಿತದಲ್ಲಿದ್ದವರಿಂದ ಆಗಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.