ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಬೆಳೆ ನಷ್ಟವಾದ ಪರಿಣಾಮ ಮನನೊಂದು ಬಾದಾಮಿ ತಾಲ್ಲೂಕಿನ ತಳಕವಾಡದ ರೈತ ಆತ್ಮಹತ್ಯೆ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮರಕ್ಕೆ ನೇಣು ಹಾಕಿಕೊಂಡು ಗ್ರಾಮದ ಮೇಗುಂಡಪ್ಪಗೌಡ (68) ಆತ್ಮಹತ್ಯೆ ಮಾಡಿಕೊಂಡವರು.
ಮೇಗುಂಡಪ್ಪ ಅವರು ನಾಲ್ಕು ಎಕರೆಯಲ್ಲಿ ಬೆಳೆದ ಗೋವಿನಜೋಳ ನೆರೆಗೆ ಸಿಲುಕಿ ಹಾನಿಗೀಡಾಗಿದೆ.
₹2.50 ಲಕ್ಷ ಕೈಗಡ ಸಾಲ ಮಾಡಿಕೊಂಡಿದ್ದ ಮೇಗುಂಡಪ್ಪ ನೆರೆಗೆ ಬೆಳೆ ಹಾನಿಯಾಗಿದ್ದರಿಂದ ಸಾಲ ತೀರಿಸೋದು ಹೇಗೆಂದು ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.