ADVERTISEMENT

ಬಾದಾಮಿ | ಬೆಂಕಿ ನಂದಿಸುವ ಅರಿವು ಅವಶ್ಯ: ರಾಜು ಲಮಾಣಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 3:11 IST
Last Updated 17 ಅಕ್ಟೋಬರ್ 2025, 3:11 IST
ಅಗ್ನಿ ಅವಘಡ ತಪ್ಪಿಸಲು ಮುನ್ನೆಚ್ಚರಿಕೆ ಕುರಿತು ಬಾದಾಮಿ ಎಸ್.ಬಿ. ಮಮದಾಪುರ ಪದವಿ ಕಾಲೇಜಿನ ಮೈದಾನದಲ್ಲಿ ಅಗ್ನಿಶಾಮಕ ಸಿಬ್ಬಂದಿ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು
ಅಗ್ನಿ ಅವಘಡ ತಪ್ಪಿಸಲು ಮುನ್ನೆಚ್ಚರಿಕೆ ಕುರಿತು ಬಾದಾಮಿ ಎಸ್.ಬಿ. ಮಮದಾಪುರ ಪದವಿ ಕಾಲೇಜಿನ ಮೈದಾನದಲ್ಲಿ ಅಗ್ನಿಶಾಮಕ ಸಿಬ್ಬಂದಿ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು   

ಬಾದಾಮಿ: ‘ನಿತ್ಯ ಜೀವನದಲ್ಲಿ ಅಗ್ನಿಯಿಂದಾಗುವ ಅಪಾಯಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಮುನ್ನೆಚ್ಚರಿಕೆ ಕುರಿತು ತಿಳಿವಳಿಕೆ ಪಡೆಯುವುದು ಅವಶ್ಯಕ’ ಎಂದು ಅಗ್ನಿ ಶಾಮಕ ದಳದ ರಾಜು ಲಮಾಣಿ ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು.

ಇಲ್ಲಿನ ಎಸ್.ಬಿ. ಮಮದಾಪುರ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದಿಂದ ಅಗ್ನಿಶಾಮಕದಳ ಆಶ್ರಯದಲ್ಲಿ ಗುರುವಾರ ಅಗ್ನಿ ಅವಘಡದ ಬಗ್ಗೆ ನಡೆದ ಪ್ರಾತ್ಯಕ್ಷಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಗ್ನಿಯಲ್ಲಿ ಎ.ಬಿ.ಸಿ.ಡಿ ಎಂದು ನಾಲ್ಕು ಪ್ರಕಾರಗಳಿವೆ. ಇವುಗಳಿಂದ ಅನಾಹುತ ತಪ್ಪಿಸಲು ವಿವಿಧ ರೀತಿಯ ಜ್ಞಾನದ ಕೌಶಲ ಅವಶ್ಯವಾಗಿದೆ’ ಎಂದು ಅಗ್ನಿಶಾಮಕ ಠಾಣಾಧಿಕಾರಿ ಬಿ.ಪಿ. ಮರಡಿ ಹೇಳಿದರು.

ADVERTISEMENT

ಪ್ರಾಚಾರ್ಯ ಎ.ಎ. ತೋಪಲಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಗ್ನಿಶಾಮಕ ಸಿಬ್ಬಂದಿ ಪ್ರವೀಣ ಮಾಡಲಗೇರಿ, ಬಿ.ಟಿ. ಕೋನೇರಿ, ಎಲ್.ಎ. ಓಗೆನ್ನವರ, ಬಸವರಾಜ ಹಗರಗುಂಡಿ, ಶ್ರೀಧರ ದೊಡಮನಿ, ಎಸ್.ಆರ್. ಮಗಿ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.