ADVERTISEMENT

ಹಳಸಿದ, ಕಳಪೆ ಆಹಾರ ಪೂರೈಕೆ ಆರೋಪ: ಅಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 4:19 IST
Last Updated 6 ನವೆಂಬರ್ 2025, 4:19 IST
ತೇರದಾಳದ ಸಾಕ್ಷಿನ್ ಹೊಟೆಲ್ನಲ್ಲಿ ಕಳಪೆ ಹಾಗೂ ಹಳಸಿದ ಆಹಾರ ನೀಡುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ನೋಟಿಸ್ ನೀಡಿದರು.
ತೇರದಾಳದ ಸಾಕ್ಷಿನ್ ಹೊಟೆಲ್ನಲ್ಲಿ ಕಳಪೆ ಹಾಗೂ ಹಳಸಿದ ಆಹಾರ ನೀಡುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ನೋಟಿಸ್ ನೀಡಿದರು.   

ತೇರದಾಳ: ಇಲ್ಲಿನ ಪೇಟೆ ಭಾಗದ ಹನುಮಾನ ದೇವಸ್ಥಾನ ಬಳಿಯ ಪುರಸಭೆ ವಾಣಿಜ್ಯ ಮಳಿಗೆಯಲ್ಲಿರುವ ಸಾಕ್ಷಿನ್ ಹೊಟೇಲ್‌ನಲ್ಲಿ ಗ್ರಾಹಕರಿಗೆ ಕಳಪೆ ಹಾಗೂ ಹಳಸಿದ ಆಹಾರ ಪದಾರ್ಥ ಪೂರೈಕೆ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರು ಬಂದ ಹಿನ್ನೆಲೆಯಲ್ಲಿ ತಾಲ್ಲೂಕು ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾ ಅಧಿಕಾರಿ ಅಪ್ಪಾಜಿ ಹೂಗಾರ ಹಾಗೂ ಸ್ಥಳೀಯ ಪುರಸಭೆ ಆರೋಗ್ಯ ಕಿರಿಯ ನಿರೀಕ್ಷಕ ಇರ್ಫಾನ್‌ ಝಾರೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಸಾರ್ವಜನಿಕರಿಂದ ಹೊಟೇಲ್‌ನಲ್ಲಿ ಕಳಪೆ ಹಾಗೂ ಹಳಸಿದ ಆಹಾರ ಪದಾರ್ಥ ಪೂರೈಕೆ ಮಾಡಲಾಗುತ್ತಿದೆ ಎಂದು ದೂರುಗಳು ಬರುತ್ತಿವೆ. ಈ ಬಗ್ಗೆ ಕ್ರಮ ಕೈಗೊಂಡು ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಂಡು ಹೊಟೇಲ್ ಅನುಮತಿ ರದ್ದುಗೊಳಿಸುವುದರ ಜತೆಗೆ ಹೊಟೇಲ್ ಸೀಜ್ ಮಾಡಲಾಗುವುದು ಎಂದು ನೋಟಿಸ್ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT