ADVERTISEMENT

ಮುಧೋಳ | ಘಟಪ್ರಭಾ ನದಿ ಪ್ರವಾಹ ವಿಕ್ಷೀಸಿದ ಜಿಲ್ಲಾಧಿಕಾರಿ ಹಾಗೂ ಎಸ್‍ಪಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 2:46 IST
Last Updated 30 ಜುಲೈ 2025, 2:46 IST
ಮುಧೋಳ ತಾಲ್ಲೂಕು ಮಾಚಕನೂರ ಗ್ರಾಮದ ಐತಿಹಾಸಿಕ ಶ್ರೀ ಹೊಳೆಬಸವೇಶ್ವರ ದೇವಸ್ಥಾನ ಘಟಪ್ರಭಾ ನದಿಯ ಪ್ರವಾಹದಿಂದ ಜಲಾವೃತ್ತವಾಗಿರುವುದು
ಮುಧೋಳ ತಾಲ್ಲೂಕು ಮಾಚಕನೂರ ಗ್ರಾಮದ ಐತಿಹಾಸಿಕ ಶ್ರೀ ಹೊಳೆಬಸವೇಶ್ವರ ದೇವಸ್ಥಾನ ಘಟಪ್ರಭಾ ನದಿಯ ಪ್ರವಾಹದಿಂದ ಜಲಾವೃತ್ತವಾಗಿರುವುದು   

ಮುಧೋಳ: ಘಟಪ್ರಭಾ ನದಿಯ ಪ್ರವಾಹದಿಂದ ತಾಲ್ಲೂಕಿನ 8 ಬ್ರಿಡ್ಜ್  ಕಂ ಬ್ಯಾರೇಜ್‍ಗಳು ಜಲಾವೃತಗೊಂಡಿದ್ದು, ವಾಹನಗಳ ಸಂಚಾರ ಸ್ಥಗಿತವಾಗಿದೆ. ಪ್ರವಾಹ ಹೆಚ್ಚಾದರೆ ತಾಲ್ಲೂಕಿನ ಮಿರ್ಜಿ, ಮಳಲಿ, ಒಂಟಗೋಡಿ, ಉತ್ತೂರ, ಮಾಚಕನೂರ, ಬುದ್ನಿ ಬಿಕೆ, ಆಲಗುಂಡಿ‌ ಬಿಕೆ ಗ್ರಾಮಗಳಿಗೆ ನೀರು ಆವರಿಸುವ ಸಾಧ್ಯತೆ ಇದೆ.

ಮಿರ್ಜಿ ಬ್ಯಾರೇಜ್, ಚನ್ನಾಳ ಬ್ಯಾರೇಜ್, ಜಾಲಿಬೇರಿ ಬ್ಯಾರೇಜ್, ಜಿರಗಾಳ ಬ್ಯಾರೇಜ್, ಅಂತಾಪುರ ಬ್ಯಾರೇಜ್, ಕಸಬಾ ಜಂಬಗಿ ಬ್ಯಾರೇಜ್,ಆಲಗುಂಡಿ, ಬಿಕೆ ಬ್ಯಾರೇಜ್, ತಿಮ್ಮಾಪುರ ಬ್ಯಾರೇಜ್ ಮುಳುಗಡೆಯಾಗಿವೆ.

ತಾಲ್ಲೂಕಿನ ಮಾಚಕನೂರ ಗ್ರಾಮದ ಐತಿಹಾಸಿಕ ಶ್ರೀ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ಶ್ರಾವಣ ಸೋಮವಾರ ಭಕ್ತರು ನೀರಿನಲ್ಲೆ ನಡೆದುಬಂದು ಸಾವಿರಾರು ಜನರು ದರುಷನ ಪಡೆದರು.

ADVERTISEMENT

ಜಿಲ್ಲಾಧಿಕರಿ ಸಂಗಪ್ಪ, ಎಸ್‍ಪಿ ಸಿದ್ಧಾರ್ಥ ಗೋಯಲ್, ಉಪವಿಭಾಗಾಧಿಕಾರಿ ಶ್ತೇತಾ ಬೀಡಿಕರ ಜಾಲಿಬೇರಿ ಬ್ಯಾರೇಜ್ ವೀಕ್ಷಿಸಿದರು. ಪ್ರವಾಹ ಪರಿಸ್ಥಿತಿಗೆ ಎದುರಿಸಲು ಸನ್ನಧರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಧೋಳ ಸೋಮವಾರ ಜಿಲ್ಲಾಧಿಕಾರಿ ಸಂಗಪ್ಪ ಎಸ್‍ಪಿ ಸಿದ್ಧಾರ್ಥ ಗೋಯಲ್ ಎಸಿ ಸ್ವೇತಾ ಬೀಡಿಕರ ಜಾಲಿಬೇರಿ ಬ್ಯಾರೇಜ್ ವಿಕ್ಷಣೆಮಾಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು
ಮುಧೋಳ ತಾಲ್ಲೂಕು ಜಾಲಿಬೇರಿ ಗ್ರಾಮದ ಬ್ಯಾರೇಜ್ ಘಟಪ್ರಭಾ ನದಿಯ ಪ್ರವಾಹದಿಂದ ಮುಳುಗಡೆಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.