ADVERTISEMENT

ಸರ್ಕಾರಿ ಶಾಲೆ ಅಭಿವೃದ್ಧಿಗೆ ಬದ್ಧ: ಬಾಬಾಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಮೇ 2025, 13:51 IST
Last Updated 16 ಮೇ 2025, 13:51 IST
ರಬಕವಿ ಬನಹಟ್ಟಿ ಸಮೀಪದ ಮದನಮಟ್ಟಿ ಗ್ರಾಮದ ಸರ್ಕಾರಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ   ಕಾರ್ಯಕ್ರಮವನ್ನು ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಬಾಬಾಗೌಡ ಪಾಟೀಲ ಉದ್ಘಾಟಿಸಿದರು
ರಬಕವಿ ಬನಹಟ್ಟಿ ಸಮೀಪದ ಮದನಮಟ್ಟಿ ಗ್ರಾಮದ ಸರ್ಕಾರಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ   ಕಾರ್ಯಕ್ರಮವನ್ನು ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಬಾಬಾಗೌಡ ಪಾಟೀಲ ಉದ್ಘಾಟಿಸಿದರು   

ರಬಕವಿ ಬನಹಟ್ಟಿ: ‘ಗ್ರಾಮದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಬದ್ಧವಾಗಿದ್ದು, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿ‍ಟ್ಟಿನಲ್ಲಿ ಗ್ರಾಮಸ್ಥರ, ಎಸ್‌ಡಿಎಂಸಿ ಅಧ್ಯಕ್ಷರ, ಸದಸ್ಯರ ಮತ್ತು ಪಾಲಕರ ಪಾತ್ರ  ಮುಖ್ಯವಾಗಿದೆ. ಇವರೆಲ್ಲರ ಸಹಕಾರದಿಂದ ಸರ್ಕಾರಿ ಶಾಲೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಏಳ್ಗೆ ಸಾಧಿಸಲಿ’ ಎಂದು ಗ್ರಾಮದ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಬಾಬಾಗೌಡ ಪಾಟೀಲ ತಿಳಿಸಿದರು.

ಸಮೀಪದ ಮದನಮಟ್ಟಿ ಗ್ರಾಮದ ಸರ್ಕಾರಿ ಕನ್ನಡ ಮತ್ತುಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ  ಗುರುವಾರ ನಡೆದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಮಖಂಡಿಯ ಮಧ್ಯಾಹ್ನ ಬಿಸಿಯೂಟ ಯೋಜನೆಯ ಸಹ ನಿರ್ದೇಶಕ ಸಿ.ಎಸ್.ಕಲ್ಯಾಣಿ ಮಾತನಾಡಿ,  ಮಕ್ಕಳ ರಕ್ತ ಹೀನತೆ  ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

ADVERTISEMENT

ಜಮಖಂಡಿಯ ಬಿ.ಆರ್.ಪಿ ರಮೇಶ ಅವಟಿ ಸರ್ಕಾರದ ಸೌಲಭ್ಯಗಳ ಬಗ್ಗೆ, ನಮ್ಮ ಶಾಲೆ ನಮ್ಮ ಜವಾಬ್ದಾರಿಯ ನೋಡಲ್ ಅಧಿಕಾರಿ ದಾನಮ್ಮ ಪಂಚಗಟ್ಟಿಮಠ ದಾಖಲಾತಿ ಮತ್ತು ಗುಣಮಟ್ಟದ ಶಿಕ್ಷಣದ ಕುರಿತು ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ ಮಗದುಮ್, ಶಿವು ಯಾದವಾಡ, ಬಸವರಾಜ ಪಾಟೀಲ, ಶ್ರೀಶೈಲ ಅವಕ್ಕನವರ, ಮಲ್ಲು ಮಲ್ಲಣ್ಣನವರ, ಕುಮಾರ ಯಲ್ಲಟ್ಟಿ, ಅಜೀಮ್ ಪ್ರೇಮಜಿ ಫೌಂಢೇಷನ್‌ನ ಸದಸ್ಯರು, ಗ್ರಾಮ ಪಂಚಾಯಿತಿ ಮತ್ತು ಎಸ್‌ಡಿಎಂಸಿ ಸದಸ್ಯರು, ಮುಖ್ಯ ಶಿಕ್ಷಕ ಡಿ.ಬಿ.ಜಾಯಗೊಂಡ, ಸುಮಿತಾ ಹಣಮನ್ನವರ, ಪವಿತ್ರಾ ಯಲ್ಲಟ್ಟಿ, ಜಗದೀಶ ಮೇತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.