ADVERTISEMENT

ನಾಮಪತ್ರ ಸಲ್ಲಿಸಲು ಎತ್ತಿನ ಬಂಡಿ ಮೆರವಣಿಗೆಯಲ್ಲಿ ಬಂದು ಗಮನ ಸೆಳೆದರು

ಸಂಗಾನಟ್ಟಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 11:42 IST
Last Updated 11 ಡಿಸೆಂಬರ್ 2020, 11:42 IST
ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದ ಆಕಾಂಕ್ಷಿಗಳು
ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದ ಆಕಾಂಕ್ಷಿಗಳು    

ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲ್ಲೂಕಿನ ಸಂಗಾನಟ್ಟಿಯಲ್ಲಿ ಶುಕ್ರವಾರ ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಕಾಂಕ್ಷಿಗಳು ಎತ್ತಿನ ಬಂಡಿ ಏರಿ ಬಂದು ಗಮನ ಸೆಳೆದರು.

ಸಂಗಾನಟ್ಟಿ ಗ್ರಾಮದ ವಾರ್ಡ್ ನಂ 1 ಹಾಗೂ 2ರಲ್ಲಿ ಸ್ಫರ್ಧೆಗೆ ಮುಂದಾಗಿರುವ ರಾಘು ಸೈದಾಪುರ, ಸತ್ಯರಾಜು ಸೈದಾಪುರ, ಪಾರ್ವತಿ ಹಿಟ್ನಾಳ, ದುಂಡಪ್ಪ ಮೇಟಿ. ಮಾನವ್ವ ಗಾಡಿಕಾರ ಎತ್ತಿನ ಬಂಡಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ಆಕಾಂಕ್ಷಿಗಳು ಇದ್ದ ಎತ್ತಿನ ಬಂಡಿಗಳನ್ನು ಹಿಂದೆ ಬೆಂಬಲಿಗರ ಸಾಲು ಸಾಲು ಬಂಡಿಗಳು ಹಿಂಬಾಲಿಸಿದವು. ಅದು ಭಜ೯ರಿ ಮೆರವಣಿಗೆಯಾಗಿ ಮಾರ್ಪಟ್ಟಿತ್ತು.

ADVERTISEMENT

ನಾಮಪತ್ರ ಸಲ್ಲಿಸುವವರು ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದರು. ಏಕಕಾಲಕ್ಕೆ 25 ಎತ್ತಿನ ಬಂಡಿಗಳು ಮೆರವಣಿಗೆಯಲ್ಲಿ ಸಾಗಿ ಬಂದವು.

ಸಂಗಾನಟ್ಟಿ ಗ್ರಾಮದಿಂದ ಮದಭಾವಿ ಗ್ರಾಮ ಪಂಚಾಯ್ತಿ ಕಚೇರಿವರೆಗೆ ಸಾಗಿದ ಎತ್ತಿನ ಬಂಡಿ ಮೆರವಣಿಗೆ ವೇಳೆ ಆಕಾಂಕ್ಷಿಗಳು ಕೈಮುಗಿಯುತ್ತಾ ನಾಮಪತ್ರ ಸಲ್ಲಿಕೆಗೆ ಮೊದಲೇ ಮತಯಾಚನೆ ಮಾಡಿದರು.

ಎತ್ತಿನ ಬಂಡಿಗಳಿಗೆ ಕಬ್ಬಿನ ಜಲ್ಲೆ, ತಳಿರು ತೋರಣ ಕಟ್ಟಿ, ಎತ್ತುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.