ADVERTISEMENT

ಬಾಗಲಕೋಟ | ಗಣಪತಿ ಬಪ್ಪ ಮೊರಯಾ; ಅದ್ದೂರಿ ಸ್ವಾಗತ

ಪಟಾಕಿ ಸಿಡಿಸಿ, ಬಣ್ಣ ಎರಚಾಡಿ ಸಂಭ್ರಮ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ: ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 2:46 IST
Last Updated 29 ಆಗಸ್ಟ್ 2025, 2:46 IST
ಬಾಗಲಕೋಟೆಯಲ್ಲಿ ಬುಧವಾರ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಸಂಭ್ರಮದಿಂದ ತೆಗೆದುಕೊಂಡು ಹೋಗಲಾಯಿತು
ಬಾಗಲಕೋಟೆಯಲ್ಲಿ ಬುಧವಾರ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಸಂಭ್ರಮದಿಂದ ತೆಗೆದುಕೊಂಡು ಹೋಗಲಾಯಿತು   

ಬಾಗಲಕೋಟ: ಗಣಪತಿ ಬಪ್ಪ ಮೊರಯಾ, ಗಣೇಶನಿಗೆ ಜೈ ಎಂದು ಘೋಷಣೆ ಕೂಗುತ್ತಾ ಯುವಕರ ಪಡೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಟ್ರ್ಯಾಕ್ಟರ್‌ಗಳಲ್ಲಿ ಬುಧವಾರ ಮೆರವಣಿಗೆಯಲ್ಲಿ ಮೂರ್ತಿಗಳನ್ನು ತಂದರು.

ಬೆಳಿಗ್ಗೆಯೇ ಗಣೇಶ ಮೂರ್ತಿಗಳನ್ನು ತೆಗೆದುಕೊಂಡ ಯುವಕ ಮಂಡಳದ, ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳ ತಲುಪಿದಾಗ ಸಂಜೆಯಾಗಿತ್ತು. ಕೆಲವು ಕಡೆಗಳಲ್ಲಿ ರಾತ್ರಿಯವರೆಗೂ ಮೂರ್ತಿಗಳ ಮೆರವಣಿಗೆ ಸಾಗಿತ್ತು. ಕೆಲವು ಗಣೇಶ ಮಂಡಳದ ಸದಸ್ಯರು ಒಂದೇ ಬಣ್ಣದ ಬಟ್ಟೆ ಹಾಕುವ ಮೂಲಕ ಗಮನ ಸೆಳೆದರು.

ಹಳೆ ಬಾಗಲಕೋಟೆ, ನವನಗರದ ವಿವಿಧ ಸೆಕ್ಟರ್‌ನ ಪ್ರಮುಖ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಪರಸ್ಪರ ಬಣ್ಣ ಎರಚಿ, ಪಟಾಕಿಗಳನ್ನು ಸಿಡಿಸುತ್ತಾ, ಡೊಳ್ಳು, ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜನರೂ ರಸ್ತೆ ಬದಿಗಳಲ್ಲಿ ನಿಂತು ಮೂರ್ತಿಗಳ ವೀಕ್ಷಣೆ ಮಾಡಿದರು.

ADVERTISEMENT

ಕಾಳಿದಾಸ ವೃತ್ತದಲ್ಲಿ ಸಂಜೆ ನೂರಾರು ಜನರು ಸೇರಿದ್ದರು. ಬಹುತೇಕ ಗಣೇಶ ಮೂರ್ತಿಗಳು ಇದೇ ಮಾರ್ಗವಾಗಿ ಹಾದುಹೋದವು. ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಾ ಯುವಕರು ಸಾಗಿದ್ದರು. ಕೆಲಕಾಲ ಸಂಚಾರಕ್ಕೂ ಅಡ್ಡಿಯಾಯಿತು.

ಮನೆಗಳಲ್ಲಿ ಗಣೇಶ ಮೂರ್ತಿ ಕೂಡಿಸುವವರು ಬೆಳಿಗ್ಗೆಯೇ ಗಣೇಶ ಮೂರ್ತಿಗಳನ್ನು ತಂದು, ಪೂಜೆ ಮಾಡಿ ಪ್ರತಿಷ್ಠಾಪಿಸಿದರು. ಮೋದಕ, ಕರಿಗಡುಬು ನೈವೇದ್ಯ ಹಿಡಿದು, ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಹಲವರು ಬುಧವಾರ ರಾತ್ರಿಯೇ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿರುವ ಬಹುತೇಕ ಗಣೇಶ ಮೂರ್ತಿಗಳ ವಿಸರ್ಜನೆ ಐದು ದಿನಕ್ಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.