ADVERTISEMENT

ಗೊಂದಲದ ಗೂಡಾದ ಗುಳೇದಗುಡ್ಡ ಪುರಸಭೆಯ ಬಜೆಟ್‌ ಸಭೆ

ಪುರಸಭೆ: ಕರಡು ತಯಾರಿಸುವಾಗ ಸದಸ್ಯರ ನಿರ್ಲಕ್ಷ್ಯಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 12:15 IST
Last Updated 8 ಜೂನ್ 2021, 12:15 IST
ಗುಳೇದಗುಡ್ಡದಲ್ಲಿ ಮಂಗಳವಾರ ನಡೆದ ಪುರಸಭೆಯ ಬಜೆಟ್ ಸಭೆ ಗೊಂದಲದ ಗೂಡಾಗಿತ್ತು
ಗುಳೇದಗುಡ್ಡದಲ್ಲಿ ಮಂಗಳವಾರ ನಡೆದ ಪುರಸಭೆಯ ಬಜೆಟ್ ಸಭೆ ಗೊಂದಲದ ಗೂಡಾಗಿತ್ತು   

ಗುಳೇದಗುಡ್ಡ: ಬಜೆಟ್ ಪೂರ್ವಭಾವಿ ಸಭೆ ಕರೆಯದೇ, ಸದಸ್ಯರ ಗಮನಕ್ಕೂ ತರದೆ ತಯಾರಿಸಿ ಸಭೆಗೆ ಹಂಚಿದ ಕರಡು ಪ್ರತಿ ಅವೈಜ್ಞಾನಿಕವಾಗಿದೆ ಎಂದು ಪುರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಮಂಗಳವಾರ ಇಲ್ಲಿ ನಡೆದ ಪುರಸಭೆ ಬಜೆಟ್‌ ಸಭೆಯನ್ನೇ ಮುಂದೂಡಲಾಯಿತು.

ಬಜೆಟ್‌ಕರಡು ಪ್ರತಿಯನ್ನು ಒಪ್ಪದೆ, ಸದಸ್ಯರು ಗರಂ ಆಗಿ ಒಕ್ಕೊರಲಿನಿಂದಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಸಭೆ ಮುಂದೂಡಿದರು.

2021-22ನೇ ಸಾಲಿನ ಬಜೆಟ್‌ಮಂಡಿಸಿ, ಚರ್ಚೆ ಮಾಡಿ, ಅನುಮೋದನೆ ಪಡೆಯಲು ಸಭೆ ಕರೆಯಲಾಗಿತ್ತು.ಸಭೆ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯ ಉಮೇಶ ಹುನಗುಂದ, ಸಂತೋಷ ನಾಯನೇಗಲಿ, ಕಾಂಗ್ರೆಸ್ಸಿನವಿನೋದ ಮದ್ದಾನಿ, ಯಲ್ಲಪ್ಪ ಮನ್ನಿಕಟ್ಟಿ ಮುಂತಾದವರು ಪೂರ್ವಭಾವಿ ಸಭೆ ಕರೆಯದೆ ಕರಡು ಪ್ರತಿ ತಯಾರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಸಭೆ ಮುಂದೂಡಲು ಅಧ್ಯಕ್ಷರನ್ನು ಒತ್ತಾಯಿಸಿದರು. ಮುಖ್ಯಾಧಿಕಾರಿ ಚಿದಾನಂದ ಮಠಪತಿ ಸದಸ್ಯರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಿಲ್ಲ.

ADVERTISEMENT

ಮೌನಕ್ಕೆ ಶರಣಾದ ಅಧ್ಯಕ್ಷರು: ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಪುರಸಭೆ ಅಧ್ಯಕ್ಷರು ಮೌನಕ್ಕೆ ಜಾರಿದರು. ಅಧಿಕಾರರೂಢ ಕಾಂಗ್ರೆಸ್‌ ಸದಸ್ಯರ ಸಭೆಗೆ ಗೈರಾಗಿದ್ದು ಎದ್ದು ಕಾಣುತ್ತಿತ್ತು. 15 ಜನರ ಸದಸ್ಯರಲ್ಲಿ ಭಿನ್ನಮತದ ಹೊಗೆಯೂ ಆಡುತ್ತಿದೆ ಎಂಬ ಮಾತು ಕೈ ಸದಸ್ಯರಲ್ಲಿಯೇ ಕೇಳಿಬಂದಿತು.

ಸಭೆಯ ಆರಂಭದಲ್ಲಿ ಕಾಂಗ್ರೆಸ್‌ ಸದಸ್ಯರು ಕೂಡ ಕರಡು ತಯಾರಿಕೆಗೆ ಕರೆಯದ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಜೆಡಿಎಸ್ ಸದಸ್ಯರಾದ ಉಮೇಶ ಹುನಗುಂದ, ಸಂತೋಷ ನಾಯನೇಗಲಿ, ಬಿಜೆಪಿಯ ಪ್ರಶಾಂತ ಜವಳಿ, ಕರಡು ಪ್ರತಿಯ ದೋಷಗಳನ್ನು ಎಳೆ, ಎಳೆಯಾಗಿ ವಿವರಿಸಿದರು. 23 ಸದಸ್ಯರಲ್ಲಿ 19 ಸದಸ್ಯರು ಹಾಜರಿದ್ದರು.

‘ನಾವು ಅಭಿವೃದ್ಧಿ ಪರವಾಗಿದ್ದೇವೆ. ಬಜೆಟ್ ಪೂರ್ವಭಾವಿ ಸಭೆ ಕರೆದಿಲ್ಲ. ಕರಡು ಪ್ರತಿಗೆ ಅಧ್ಯಕ್ಷರ, ಮುಖ್ಯಾಧಿಕಾರಿಗಳ, ಲೆಕ್ಕಾಧಿಕಾರಿಗಳ ಸಹಿ ಇಲ್ಲ.ಕರಡು ಪ್ರತಿಯಲ್ಲಿ ಅಂಕಿ ಸಂಖ್ಯೆಗಳು ಸರಿ ಇಲ್ಲ’ ಎಂದುಪುರಸಭೆ ಜೆಡಿಎಸ್‌ ಸದಸ್ಯರಾದಉಮೇಶ ಹುನಗುಂದ,ಸಂತೋಷ ನಾಯನಾಗಲಿ ಹಾಗೂ ಬಿಜೆಪಿಯಪ್ರಶಾಂತ ಜವಳಿ ಹೇಳಿದರು.

ಕೋಟ್

ನನ್ನ ಗಮನಕ್ಕೆ ತರದೇ ಅಧಿಕಾರಿಗಳು ಬಜೆಟ್‌ ಕರಡು ಪ್ರತಿತಯಾರಿಸಿದ್ದಾರೆ. ಅದಕ್ಕೆ ಸಭೆ ಮುಂದೂಡಿದ್ದೇನೆ. ಎಲ್ಲರ ವಿಶ್ವಾಸ ಪಡೆದು ವಾರದೊಳಗೆ ಬಜೆಟ್ ಸಭೆ ಮಾಡುತ್ತೇನೆ.
ಶಿಲ್ಪಾ ನಾಗರಾಜ ಹಳ್ಳಿ
ಪುರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.