ಗುಳೇದಗುಡ್ಡ: ದೇಶವು ತ್ಯಾಗ, ಬಲಿದಾನಗಳ ಮೇಲೆ ನಿಂತಿದೆ. ರಾಣಿ ಚೆನ್ನಮ್ಮ, ಅಬ್ಬಕ್ಕನಂಥವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಅಗತ್ಯವಿದೆ ಎಂದು ಮುರುಘಾಮಠದ ಕಾಶೀನಾಥ ಶ್ರೀಗಳು ಹೇಳಿದರು.
ಅವರು ಮಂಗಳವಾರ ಜರುಗಿದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮರ 200 ನೇ ಹಾಗೂ ರಾಣಿ ಅಬ್ಬಕ್ಕರ 500 ನೇ ಜಯಂತೋತ್ಸವದ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ ಇವರಾಗಿದ್ದು ಇವರ ಆದರ್ಶ ಮಾದರಿಯಾಗಿದೆ ಎಂದು ಹೇಳಿದರು.
ಎಬಿವಿಪಿಯ ಸಂಜನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಮತ್ತು ಉತ್ತರ ಪ್ರಾಂತ್ಯ ಎಬಿವಿಪಿ ರಾಜ್ಯ ಉಪಾಧ್ಯಕ್ಷೆ ಸುಮಾ ಬೋಳರೆಡ್ಡಿ ಮಾತನಾಡಿದರು.
ಮಾಜಿಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಶೋಕ ಹೆಗಡಿ, ಎಬಿವಿಪಿ ತಾಲ್ಲೂಕು ಅಧ್ಯಕ್ಷ ರವಿ ಉಪ್ಪಾರ, ಯುವ ಮುಖಂಡ ಭುವನೇಶ ಪೂಜಾರ, ಎಬಿವಿಪಿ ಕಾರ್ಯಕರ್ತರು ಶಾಲಾ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಮೆರವಣಿಗೆ: ರಾಣಿ ಚೆನ್ನಮ್ಮ ಹಾಗೂ ಅಬ್ಬಕ್ಕನವರ ಮೂರ್ತಿ ಮೆರವಣಿಗೆ ಭಂಡಾರಿ ಕಾಲೇಜಿನಿಂದ ಆರಂಭವಾಗಿ ಪವಾರ ಕ್ರಾಸ್, ಪುರಸಭೆ ಮಾರ್ಗವಾಗಿ, ಸರಾಫ್ ಬಜಾರ, ಕಂಠಿಪೇಟೆಯವರೆಗೆ ಸಾಗಿ ಅಲ್ಲಿ ಪೂಜೆಯೊಂದಿಗೆ ಮುಕ್ತಾಯಗೊಳಿಸಲಾಯಿತು. ನಂತರ ಬಾದಾಮಿಗೆ ಬೀಳ್ಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.