ಬೀಳಗಿ: ಕೈಮಗ್ಗ ಉದ್ಯಮದ ಮಹತ್ವವನ್ನು ಪುನಃಸ್ಥಾಪಿಸುವುದು, ಕೈಮಗ್ಗ ಕುಶಲಕರ್ಮಿಗಳ ಕೊಡುಗೆಯನ್ನು ಗುರುತಿಸುವುದು ಮತ್ತು ಈ ಸಾಂಪ್ರದಾಯಿಕ ಉದ್ಯಮಕ್ಕೆ ಬೆಂಬಲ ನೀಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ ಎಂದು ಗಿರಿಸಾಗರ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ಹೆಗ್ಗೂರ ಹೇಳಿದರು.
ತಾಲ್ಲೂಕಿನ ಗಿರಿಸಾಗರ ಗ್ರಾಮದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಾಲ್ಲೂಕು ನೇಕಾರ ಸಮುದಾಯಗಳ ಒಕ್ಕೂಟದ ಉಪಾಧ್ಯಕ್ಷ ಶರಣಪ್ಪ ಅಗ್ನಿ ಮಾತನಾಡಿ, ಕೈಮಗ್ಗ ಉದ್ಯಮವು ಗ್ರಾಮೀಣ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ಲಕ್ಷಾಂತರ ಕುಶಲಕರ್ಮಿಗಳು ಮತ್ತು ನೇಕಾರರನ್ನು ಒಳಗೊಂಡಿದೆ. ಕೈಮಗ್ಗ ಉತ್ಪನ್ನಗಳು ಪರಿಸರ ಸ್ನೇಹಿಯಾಗಿರುತ್ತವೆ. ಏಕೆಂದರೆ ಅವುಗಳನ್ನು ನೈಸರ್ಗಿಕ ನಾರುಗಳು ಮತ್ತು ಬಣ್ಣಗಳನ್ನು ಬಳಸಿ ಉತ್ಪಾದಿಸಲಾಗುತ್ತದೆ ಎಂದು ತಿಳಿಸಿದರು.
ನೇಕಾರ ಯುವ ಮುಖಂಡ ರುದ್ರೇಶ ತೆಗ್ಗಿ ಮಾತನಾಡಿ, ರಾಷ್ಟ್ರೀಯ ಕೈಮಗ್ಗ ದಿನವನ್ನು ವಾರ್ಷಿಕವಾಗಿ ಆಗಸ್ಟ್ 7 ರಂದು ಆಚರಿಸಲಾಗುತ್ತದೆ. ಭಾರತೀಯ ಕೈಮಗ್ಗ ಸಂಪ್ರದಾಯದ ಶ್ರೀಮಂತ ಪರಂಪರೆಯನ್ನು ಗೌರವಿಸಲು ಮತ್ತು ನೇಕಾರರ ಅಮೂಲ್ಯ ಕೊಡುಗೆಗಳನ್ನು ಗುರುತಿಸಲು ಈ ದಿನವನ್ನು ಸಮರ್ಪಿಸಲಾಗಿದೆ ಎಂದರು.
ಶಿವು ಬಾಡಗಂಡಿ ಸ್ವಾಗತಿಸಿ ವಂದಿಸಿದರು. ಬಸಪ್ಪ ಕುಂಟೋಜಿ, ರುದ್ರಪ್ಪ ಕೋಟಿ ಸುಭಾಸ ದೇವಾಕರ, ಶಂಕ್ರಪ್ಪ ಜಾಡಗೌಡ್ರ, ನಾಗಪ್ಪ ದಿವಟಗಿ, ಚನ್ನಮಲ್ಲಪ್ಪ ಸೂಗೂರ, ಸಂಗಪ್ಪ ಹೆಗಡೆ, ಮಲಕಾಜಪ್ಪ ಬಿಲಕೇರಿ, ವಸಂತ ಗೊಳಸಂಗಿ,ಚಿನ್ನು ಚಿನ್ನಗುಂಡಿ ದಾನಪ್ಪ ದೇವಕಾರ, ಶ್ರೀಕಾಂತ ಶಿಕ್ಕೇರಿ, ಈರಣ್ಣ ಶೆಟ್ಟೆಪ್ಪನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.