ADVERTISEMENT

ಶೋಭಾಯಾತ್ರೆ: ಕಲ್ಲು ಎಸೆದವರು ಕಿಡಿಗೇಡಿಗಳು–ಹನುಮಂತ ಮಳಲಿ

ವಿರಾಟ ಹಿಂದೂ ಸಮ್ಮೇಳನ: ಹನುಮಂತ ಮಳಲಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 18:24 IST
Last Updated 21 ಫೆಬ್ರುವರಿ 2026, 18:24 IST
<div class="paragraphs"><p>ಬಾಗಲಕೋಟೆ ತರಕಾರಿ ಮಾರುಕಟ್ಟೆ ಬಳಿ ಶುಕ್ರವಾರ ಕಲ್ಲು ತೂರಾಟ ನಡೆದ ಕಾರಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಯುವಕರನ್ನು ಚದುರಿಸಿದರು</p></div>

ಬಾಗಲಕೋಟೆ ತರಕಾರಿ ಮಾರುಕಟ್ಟೆ ಬಳಿ ಶುಕ್ರವಾರ ಕಲ್ಲು ತೂರಾಟ ನಡೆದ ಕಾರಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಯುವಕರನ್ನು ಚದುರಿಸಿದರು

   

ಬಾಗಲಕೋಟೆ: ‘ಕೃಷ್ಣನ ಕೈಯಲ್ಲಿ ಚಕ್ರ, ಶಿವನ ಕೈಯಲ್ಲಿ ತ್ರಿಶೂಲ ಇದೆ. ಈಗೊಬ್ಬರು ಬುಲ್ಡೋಜರ್ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಬಾಗಲಕೋಟೆಗೂ ಬರಲಿದೆ’ ಎಂದು ಧರ್ಮ ಜಾಗರಣ ಸಮಿತಿ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹನುಮಂತ ಮಳಲಿ ಹೇಳಿದರು.

ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಶನಿವಾರ ನವನಗರದಲ್ಲಿ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದರು.

ADVERTISEMENT

‘ಶೋಭಾಯಾತ್ರೆ ಮೇಲೆ ಕಲ್ಲು ಎಸೆದವರು ಕಿಡಿಗೇಡಿಗಳು. ರಾಷ್ಟ್ರ ರಕ್ಷಣೆಗಾಗಿ ಹೋರಾಡಿದ ಶಿವಾಜಿ ಶೋಭಾಯಾತ್ರೆಗೆ ಮಸೀದಿ ಮೇಲಿಂದ ಹೂ ಹಾಕಬೇಕೇ ಹೊರತು ಚ‍‍ಪ್ಪಲಿ ಎಸೆಯಬಾರದು. ಮುಂದೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಪಾಕಿಸ್ತಾನ ಏಳನೇ ತರಗತಿ ಪಠ್ಯದಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಪಠ್ಯವಿದೆ. ಅಂತಹ ಯೋಧ ಹುಟ್ಟಲಿ ಎಂದು ಪಠ್ಯದಲ್ಲಿ ಅಳವಡಿಸಲಾಗಿದೆ. ಆದರೆ, ನಮ್ಮಲ್ಲಿ ಅವರ ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಅವಮಾನ ಮಾಡಿದಂತೆ’ ಎಂದರು

‘ಪ್ರಧಾನಿ ನರೇಂದ್ರ ಮೋದಿ ಒಬ್ಬರನ್ನೇ ಸ್ಯಾಂಪಲ್‌ ಆಗಿ ನೀಡಿದ್ದೇವೆ. ವಿಶ್ವವೇ ಕೊಂಡಾಡುತ್ತಿದೆ. ಅಂತಹ ಸಾವಿರಾರು ಮಂದಿ ನಮ್ಮಲ್ಲಿದ್ದಾರೆ. ಜನಸಂಖ್ಯಾ ನಿಯಂತ್ರಣಕ್ಕೆ ದೇಶದಲ್ಲಿ ಒಂದೇ ಕಾನೂನು ಆಗುವವರೆಗೆ ನೀವೂ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಡಿ’ ಎಂದರು.

‘ಸೋಗಲಾಡಿ ಸರ್ಕಾರಕ್ಕೆ ಮತ ಹಾಕಿದ್ದೇವೆ. ಯೋಗ್ಯತೆ ಇಲ್ಲದವರಿಗೆ ಮತ ಹಾಕಬೇಡಿ. ಯಾವುದೇ ಪಕ್ಷಕ್ಕೆ ಮತ ಹಾಕಿ ಎನ್ನುವುದಿಲ್ಲ. ಯಾವುದೇ ಪಕ್ಷದ ಮೇಲೆ ನಂಬಿಕೆ ಇಲ್ಲ. ಕೆಲವರು ಪಕ್ಷದಲ್ಲಿ ಮುಖವಾಡ ಹಾಕಿಕೊಂಡವರಿದ್ದಾರೆ. ಬೇರೆ ಪಕ್ಷದಲ್ಲೂ ಒಳ್ಳೆಯವರಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.