ADVERTISEMENT

ರಬಕವಿ ಬನಹಟ್ಟಿ: ಭಾರಿ ಮಳೆಗೆ ರಸ್ತೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 14:04 IST
Last Updated 9 ಅಕ್ಟೋಬರ್ 2024, 14:04 IST
ರಬಕವಿ ಬನಹಟ್ಟಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯು ಜಲಾವೃತಗೊಂಡಿರುವುದು
ರಬಕವಿ ಬನಹಟ್ಟಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯು ಜಲಾವೃತಗೊಂಡಿರುವುದು   

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಪ್ರದೇಶಲ್ಲಿ ಮಧ್ಯಾಹ್ನ 1.30ರಿಂದ ಗುಡುಗು ಮತ್ತು ಸಿಡಿಲಿನೊಂದಿಗೆ ರಭಸದ ಮಳೆ ಸುರಿಯಿತು. ಭಾರಿ ಮಳೆಯಿಂದಾಗಿ ಇಲ್ಲಿನ ಕಾಲೇಜು ರಸ್ತೆಯ ಮುಂಭಾಗದ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯು ಜಲಾವೃತಗೊಂಡಿತು ಮತ್ತು ಬಹುತೇಕ ಚರಂಡಿಗಳು ತುಂಬಿ ಹರಿದಿವೆ.

ಈ ಭಾಗದ ಬೆಳೆಗಳಿಗೆ ಮಳೆಯ ಅವಶ್ಯಕತೆ ಬಹಳಷ್ಟು ಇತ್ತು. ಮಳೆಯಿಂದಾಗಿ ಬೆಳೆಗಳಿಗೂ ಕೂಡಾ ಅನುಕೂಲವಾಗಿದೆ.

ಬನಹಟ್ಟಿಯಲ್ಲಿ ಸುರಿದ ಭಾರಿ ಮಳೆಗೆ ಚರಂಡಿಯಲ್ಲಿಯ ನೀರು ರಭಸದಿಂದ ಹರಿಯುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT