ADVERTISEMENT

ವಿವಿಗಳಲ್ಲಿ ಹಿಂದಿ ಪ್ರಮುಖ ಭಾಷೆಯಾಗಿ ಬಳಕೆ: ಗುಲಾಬ ರಾಠೊಡ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 4:10 IST
Last Updated 26 ಸೆಪ್ಟೆಂಬರ್ 2025, 4:10 IST
ಮಹಾಲಿಂಗಪುರದ ಕೆಎಲ್‍ಇ ಪದವಿ ಕಾಲೇಜಿನಲ್ಲಿ ಹಿಂದಿ ವಿಭಾಗ ವತಿಯಿಂದ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಶಾಂತ ಗವಳಿ ಮಾತನಾಡಿದರು
ಮಹಾಲಿಂಗಪುರದ ಕೆಎಲ್‍ಇ ಪದವಿ ಕಾಲೇಜಿನಲ್ಲಿ ಹಿಂದಿ ವಿಭಾಗ ವತಿಯಿಂದ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಶಾಂತ ಗವಳಿ ಮಾತನಾಡಿದರು   

ಮಹಾಲಿಂಗಪುರ: ‘ಡಿಜಿಟಲ್ ಯುಗದಲ್ಲಿ ಹಿಂದಿ ಭಾಷೆ ಬಳಕೆ ಹೆಚ್ಚಾಗುತ್ತಿದ್ದು, ಯಾವ ಭಾಷೆಗೂ ಹಿಂದೆ ಬಿದ್ದಿಲ್ಲ. ವಿಶ್ವದ ಇನ್ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಹಿಂದಿ ಪ್ರಮುಖ ಭಾಷೆಯಾಗಿ ಬಳಕೆಯಾಗುತ್ತಿದೆ’ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಗುಲಾಬ ರಾಠೊಡ ಹೇಳಿದರು.

ಪಟ್ಟಣದ ಕೆಎಲ್‍ಇ ಸಂಸ್ಥೆಯ ಎಸ್‍ಸಿಪಿ ಪದವಿ ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಡಿಜಿಟಲ್ ಯುಗದಲ್ಲಿ ಹಿಂದಿ ಶಿಕ್ಷಣದ ಹೊಸ ಪ್ರಯೋಗ’ ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದಿ ವಿಭಾಗದ ಮುಖ್ಯಸ್ಥ ಪ್ರಶಾಂತ ಗವಳಿ ಮಾತನಾಡಿ, ‘ಹಿಂದಿ ಜಗತ್ತಿನಲ್ಲಿ ಅತಿ ಹೆಚ್ಚು ಮಾತನಾಡುವ ಮೂರನೇ ಭಾಷೆಯಾಗಿದೆ. ಭಾಷೆಯಲ್ಲಿ ಸಂಶೋಧನೆಗಳು ಹೆಚ್ಚಾಗುತ್ತಿವೆ’ ಎಂದರು.

ADVERTISEMENT

ಪ್ರಭಾರ ಪ್ರಾಚಾರ್ಯ ಸುನಂದಾ ಸೋರಗಾಂವಿ ಅಧ್ಯಕ್ಷತೆ ವಹಿಸಿದ್ದರು. ಆರ್.ವಿ.ಚೌಗಲಾ, ಎಸ್.ಸಿ.ಬಿಜ್ಜರಗಿ, ಟಿ.ಡಿ.ಡಂಗಿ, ಎಸ್.ಎಸ್.ಮುಗಳ್ಯಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.