ADVERTISEMENT

ಬಾದಾಮಿ: ಬೆಟ್ಟದ ಭಿತ್ತಿಯಲ್ಲಿ ಪಾರ್ಶ್ವನಾಥ ಉಬ್ಬುಶಿಲ್ಪ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 23:30 IST
Last Updated 2 ಜೂನ್ 2025, 23:30 IST
ಬಾದಾಮಿ ನಾಲ್ಕನೇ ಜೈನ ಬಸದಿ ಕೆಳಗಿನ ಬೆಟ್ಟದಲ್ಲಿ ಪಾರ್ಶ್ವನಾಥ ಉಬ್ಬುಶಿಲ್ಪಗಳನ್ನು ಅಧಿಕಾರಿಗಳು ಪರಿಶೀಲಿಸಿದರು
ಬಾದಾಮಿ ನಾಲ್ಕನೇ ಜೈನ ಬಸದಿ ಕೆಳಗಿನ ಬೆಟ್ಟದಲ್ಲಿ ಪಾರ್ಶ್ವನಾಥ ಉಬ್ಬುಶಿಲ್ಪಗಳನ್ನು ಅಧಿಕಾರಿಗಳು ಪರಿಶೀಲಿಸಿದರು   

ಬಾದಾಮಿ: ‘ನಾಲ್ಕನೇ ಜೈನಗುಹೆಯ ಕೆಳಗಿನ ಬೆಟ್ಟದ ಭಿತ್ತಿಯ ಮೇಲೆ ಈಚೆಗೆ ಮೂರು ಪಾರ್ಶ್ವನಾಥ ಉಬ್ಬುಶಿಲ್ಪ ಮತ್ತು ಒಂದು ಸಾಲಿನ ಶಿಲಾ ಶಾಸನವು ಪತ್ತೆಯಾಗಿವೆ’ ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀಕ್ಷಕ ರಮೇಶ ಮೂಲಿಮನಿ ತಿಳಿಸಿದರು. 

ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಚಾಲುಕ್ಯರು 6ನೇ ಶತಮಾನದಲ್ಲಿ ನಿರ್ಮಿಸಿದ ನಾಲ್ಕನೇ ಜೈನ ಗುಹಾಲಯದ ಕೆಳಗಿನ ಬೆಟ್ಟದಲ್ಲಿ ಮೂರು ತಿಂಗಳಿನಿಂದ ಅನ್ವೇಷಣೆ ನಡೆದಿದೆ.

‘ನಾಲ್ಕನೇ ಬಸದಿ ಕೆಳಗೆ ಗಿಡಗಳ ಗುಂಪನ್ನು ಶುಚಿಗೊಳಿಸುವಾಗ, ಕಲ್ಲುಪಡಿಯಲ್ಲಿ ಉಬ್ಬು ಶಿಲ್ಪಗಳು ಮತ್ತು ಒಂದು ಸಾಲಿನಲ್ಲಿ ‘ಕುಳಿಮಂಜ’ ಎಂದು ಬರೆದ ಶಾಸನ ಸಿಕ್ಕಿದೆ. ‘ಕುಳಿಮಂಜ’ ಎನ್ನುವ ಶಾಸನ ಉತ್ತರದ ಗುಡ್ಡದಲ್ಲೂ ಪತ್ತೆಯಾಗಿದೆ. ಅದು  ಒಬ್ಬ ಶಿಲ್ಪಿಯ ಹೆಸರು ಇರಬಹುದು’ ಎಂದು ಅವರು ತಿಳಿಸಿದರು.

ADVERTISEMENT

‘ಚಾಲುಕ್ಯ ಶಿಲ್ಪಿಗಳು ಬೆಟ್ಟದ ನಾಲ್ಕನೇ ಜೈನ ಬಸದಿಯಲ್ಲಿ ಮೂರ್ತಿಗಳನ್ನು ರೂಪಿಸುವ ಮುನ್ನ ಉಬ್ಬು ಮೂರ್ತಿಗಳನ್ನು ತಯಾರಿಸಲು ಪ್ರಯತ್ನಿಸಿರಬಹುದು. ಇನ್ನೂ ಅನ್ವೇಷಣೆ ಕಾರ್ಯ ಮುಂದುವರಿದಿದೆ. ಚಾಲುಕ್ಯರ ಇತಿಹಾಸದ ಬಗ್ಗೆ ಇನ್ನಷ್ಟು ಹೊಸ ಮಾಹಿತಿ ಸಿಗಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.