
ಗುಳೇದಗುಡ್ಡ: ತಾಲ್ಲೂಕಿನ ಕೋಟೆಕಲ್ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥದ ಕಳಸ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಶುಕ್ರವಾರ ಜರುಗಿತು.
ಪಟ್ಟಣದ ಹೊಸಪೇಟೆಯ ಹೆಗಡೆ ಅವರ ಮನೆಯಿಂದ ಕಳಸದ ಮೆರವಣಿಗೆ ಹಾಗೂ ಹೊಸಪೇಟೆಯ ಬಸವೇಶ್ವರ ದೇವಸ್ಥಾನದಿಂದ ರಜತ ಮೂರ್ತಿಯ ಅಡ್ಡಪಲ್ಲಕ್ಕಿ ಮೆರವಣಿಗೆ ಹೊರಟು ಸಾಲೇಶ್ವರ ದೇವಸ್ಥಾನ, ಪವಾರ್ ಕ್ರಾಸ್, ಪುರಸಭೆ, ಅರಳಿಕಟ್ಟಿ, ಚೌ ಬಜಾರ್, ಗಚ್ಚಿನಕಟ್ಟಿ, ಬಾದಾಮಿ ನಾಕಾ ಮೂಲಕ ಹಾಯ್ದು ಕೋಟೆಕಲ್ ಗ್ರಾಮಕ್ಕೆ ಬಂದು ತಲುಪಿತು.
ಹೊಳೆ ಹುಚ್ಚೇಶ್ವರ ರಜತ ಮೂರ್ತಿ ಮೆರವಣಿಗೆ ಮಾಡಲಾಯಿತು. ರಥದ ಕಳಸ ಹಾಗೂ ರಜತ ಅಡ್ಡಪಲ್ಲಕ್ಕಿಗೆ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸಿದರು.
ಕರಡಿಮಜಲು, ಮದ್ದಳೆ, ಭಜನೆ ಹೀಗೆ ಹಲವು ಜನಪದ ಕಲಾಗೊಂಬೆಗಳು, ವಾದ್ಯ ಮೇಳಗಳು ಮೆರವಣಿಗೆಗೆ ವಿಶೇಷ ಸಾಥ್ ನೀಡಿದವು. ಹೊಳೆಹುಚ್ಚೇಶ್ವರ ಶ್ರೀಗಳು ಕಳಸದ ಮೆರವಣಿಗೆಗೆ ಚಾಲನೆ ನೀಡಿದರು.
ಶಶಿಧರ ದೇಸಾಯಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ನೀಲಪ್ಪ ಅಬಕಾರಿ, ಸಂಗಪ್ಪ ಹಡಪದ, ಅಶೋಕ ಬರಗುಂಡಿ, ಪರಸಪ್ಪ ಆಲೂರ, ಸಿದ್ದಲಿಂಗಪ್ಪ ಬರಗುಂಡಿ, ಶೇಖಪ್ಪ ಕಡಪಟ್ಟಿ, ಅಶೋಕ ಅರಮನಿ, ಬಸವರಾಜ ಬರಗುಂಡಿ, ಮಲ್ಲಪ್ಪ ತಳವಾರ, ಹುಚ್ಚಪ್ಪ ಮೇಟಿ ಅಯ್ಯಪ್ಪ ಕೋಟಿ, ಮುತ್ತು ಮೊರಬದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.