
ಹುನಗುಂದ: ತಾಲ್ಲೂಕಿನ ಹಗೇದಾಳ ಗ್ರಾಮದ ಭರಮಗೌಡ ಅಗಸಿಮುಂದಿನ ಅವರು ಹೊಲದಲ್ಲಿ ಕೂಡಿ ಹಾಕಿದ್ದ ಕಡಲೆ ಬಣವೆಗೆ ಬುಧವಾರ ನಸುಕಿನ ಜಾವ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.
ಗ್ರಾಮದ ಸರ್ವೆ ನಂ. 33/5 ರಲ್ಲಿ ಬೇರೆ ಹೊಲಗಳಿಂದ ಕಟಾವು ಮಾಡಿದ್ದ ಕಡಲೆಯನ್ನು ತಂದು ಇಲ್ಲಿ ಬಣವೆ ಒಟ್ಟಾಲಾಗಿತ್ತು. ಅಂದಾಜು ₹ 1 ಲಕ್ಷ ಮೌಲ್ಯದ ಕಡಲೆ ಬೆಂಕಿಗೆ ಆಹುತಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಸಾಲ ಮಾಡಿ ಕಡಲೆ ಬಿತ್ತನೆ ಮಾಡಲಾಗಿತ್ತು. ಈ ಬೆಳೆಯನ್ನು ನಂಬಿ ವರ್ಷದ ಜೀವನ ಸಾಗಿಸಬೇಕಾಗಿತ್ತು. ಇನ್ನೇನು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ಬೆಳೆ ಬೆಂಕಿಗೆ ಸುಟ್ಟು ಬೂದಿಯಾಗಿದೆ. ಸರ್ಕಾರ ಈ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ಭರಮಗೌಡ ಮನವಿ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.