ADVERTISEMENT

ಹುನಗುಂದ | ಅಕ್ರಮ ಚಟುವಟಿಕೆ ತಡೆಗೆ ಮಹಿಳೆಯರ ಆಗ್ರಹ

ಡಿವೈಎಸ್‌ಪಿ ಕಚೇರಿಯ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 3:02 IST
Last Updated 19 ಜುಲೈ 2025, 3:02 IST
ಹುನಗುಂದ ತಾಲ್ಲೂಕಿನ ಮರೋಳ ಮತ್ತು ಕೊಪ್ಪ ಎಸ್.ಎಂ ಗ್ರಾಮದಲ್ಲಿ ಮದ್ಯಪಾನ, ಮಟ್ಕಾ, ಇಸ್ಪೀಟ್ ಸೇರಿದಂತೆ ಇತರ ಅಕ್ರಮ ಚಟುವಟಿಕೆ ನಿಷೇಧಿಸಬೇಕು ಎಂದು ಆಗ್ರಹಿಸಿ ಮಹಿಳೆಯರು ಪಟ್ಟಣದ ಡಿವೈೆಎಸ್‌ಪಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಸಿಪಿಐ ಸುನೀಲ್ ಸವದಿ ಅವರಿಗೆ ಮನವಿ ಸಲ್ಲಿಸಿದರು
ಹುನಗುಂದ ತಾಲ್ಲೂಕಿನ ಮರೋಳ ಮತ್ತು ಕೊಪ್ಪ ಎಸ್.ಎಂ ಗ್ರಾಮದಲ್ಲಿ ಮದ್ಯಪಾನ, ಮಟ್ಕಾ, ಇಸ್ಪೀಟ್ ಸೇರಿದಂತೆ ಇತರ ಅಕ್ರಮ ಚಟುವಟಿಕೆ ನಿಷೇಧಿಸಬೇಕು ಎಂದು ಆಗ್ರಹಿಸಿ ಮಹಿಳೆಯರು ಪಟ್ಟಣದ ಡಿವೈೆಎಸ್‌ಪಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಸಿಪಿಐ ಸುನೀಲ್ ಸವದಿ ಅವರಿಗೆ ಮನವಿ ಸಲ್ಲಿಸಿದರು   

ಹುನಗುಂದ: ತಾಲ್ಲೂಕಿನ ಮರೋಳ ಮತ್ತು ಕೊಪ್ಪ ಎಸ್.ಎಂ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಸಟ್ಕಾ ಮಟ್ಕಾ, ಇಸ್ಪೀಟ್ ಹಾಗೂ ಅಕ್ರಮ ಚಟುವಟಿಕೆ ನಿಷೇಧಿಸಬೇಕು ಎಂದು ಆಗ್ರಹಿಸಿ ಗ್ರಾಮದ ಮಹಿಳೆಯರು ಪಟ್ಟಣದ ಡಿವೈಎಸ್‌ಪಿ ಕಚೇರಿಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಸಿಪಿಐ ಸುನೀಲ್ ಸವದಿ ಅವರಿಗೆ ಮನವಿ ಸಲ್ಲಿಸಿದರು.

‘ತಾಲ್ಲೂಕಿನ ಮರೋಳ ಮತ್ತು ಕೊಪ್ಪ ಎಸ್.ಎಂ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಮಟ್ಕಾ, ಇಸ್ಪೀಟ್ ಹಾಗೂ ಅಕ್ರಮ ಚಟುವಟಿಕೆಗಳು ಬಹಿರಂಗವಾಗಿ ನಡೆಯುತ್ತಿದೆ. ಪೊಲೀಸರುಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ವಿಷಯಕ್ಕೆ ಸಂಬಂಧಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಶಾಲಾ ಮಕ್ಕಳು ಕೂಡ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಒಂದೆರಡು ವರ್ಷಗಳಲ್ಲಿ 5-6 ಯುವಕರು ಮದ್ಯ  ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿತ್ಯ ಮನೆಯಲ್ಲಿ ತಂದೆ-ತಾಯಿ, ಹೆಂಡತಿಯರೊಂದಿಗೆ ಜಗಳ ನಡೆಯುತ್ತಿವೆ. ಇದರಿಂದ ಹಲವು ಸಂಸಾರಗಳು ಬೀದಿ ಪಾಲಾಗಿ ಸಂಕಷ್ಟ ಅನುಭವಿಸುತ್ತಿವೆ. ಅಕ್ರಮ ಚಟುವಟಿಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು’ ಎಂದು ಮನವಿ ಮಾಡಿದ್ದಾರೆ.

ಅಬಕಾರಿ ಕಚೇರಿಗೆ ಮುತ್ತಿಗೆ: ತಾಲ್ಲೂಕಿನ ಮರೋಳ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಗ್ರಾಮದ ಮಹಿಳೆಯರು ಪಟ್ಟಣದ ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಅಬಕಾರಿ ನಿರೀಕ್ಷಕ ವೆಂಕಣ್ಣ ರೆಡ್ಡಿ ಎದುರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಗುರುಬಾಯಿ ತುಂಬಲಗಡ್ಡಿ, ಶಿವಮ್ಮ ಹಿರೇಮಠ, ಪಾಟೀಲ, ಕವಿತಾ ತುಂಬಲಗಡ್ಡಿ, ಗಿರಿಜಾ ಗೋರಬಾಳ, ಸಂಗಮ್ಮ ಮಿರೇಕೂರ, ಶೋಭಾ ಸಿಂಗನಗುತ್ತಿ, ಅಮರೇಶ್ ನಾಡಗೌಡ್ರ, ದಿಲ್ಶಾದ್ ನದಾಫ್, ಸುವರ್ಣ ತುಂಬಲಗಡ್ಡಿ, ಬಸಪ್ಪ ಕೂಡ್ಲೆಪ್ಪನವರ, ಮುತ್ತಣ್ಣ ನಂದವಾಡಗಿ, ಜಗದೀಶ ಓತಗೇರಿ ಇದ್ದರು.

ಹುನಗುಂದ ತಾಲ್ಲೂಕಿನ ಮರೋಳ ಮತ್ತು ಕೊಪ್ಪ ಎಸ್.ಎಂ ಗ್ರಾಮದಲ್ಲಿ ಮದ್ಯಪಾನ ಹಾಗೂ ಅಕ್ರಮ ಚಟುವಟಿಕೆ ನಿಷೇಧಿಸಬೇಕು ಎಂದು ಆಗ್ರಹಿಸಿ ಮಹಿಳೆಯರು ಅಬಕಾರಿ ನಿರೀಕ್ಷಕ ವೆಂಕಣ್ಣ ಗಿರಡ್ಡಿ ಎದುರು ಆಕ್ರೋಶ ವ್ಯಕ್ತಪಡಿಸಿದರು
ಗ್ರಾಮಕ್ಕೆ ಭೇಟಿ ನೀಡಿ ಅಕ್ರಮ ಚಟುವಟಿಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು
ಸುನೀಲ್ ಸವದಿ ಸಿಪಿಐ ಹುನಗುಂದ
ಗ್ರಾಮಕ್ಕೆ ಭೇಟಿ ನೀಡಿ ಅಕ್ರಮವಾಗಿ ಮದ್ಯ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು
ವೆಂಕಣ್ಣ ಗಿರಡ್ಡಿ ಅಬಕಾರಿ ಇನ್‌ಸ್ಪೆಕ್ಟರ್ ಹುನಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.