ಜಮಖಂಡಿ: ಕೊಣ್ಣೂರ ಗ್ರಾಮದಿಂದ ಜಮಖಂಡಿಗೆ ಒಂದೇ ಬೈಕ್ ಮೇಲೆ ಮೂವರು ಅನುಮಾನಾಸ್ಪದವಾಗಿ ಬರುವುದನ್ನು ಗಮನಿಸಿದ ಪೊಲೀಸರು ಮೂವರನ್ನು ತಡೆದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಡುತ್ತಿರುವುದಾಗಿ ಕಳ್ಳರು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ವಿವಿಧ ಕಡೆಗಳಲ್ಲಿ 10 ಬೈಕ್, 2 ಟ್ರ್ಯಾಕ್ಟರ್ ಟ್ರೇಲರ್ ವಶಪಡಿಸಿಕೊಳ್ಳಲಾಗಿದೆ ಎಂದು ಡಿಎಸ್‌ಪಿ ಶಾಂತವೀರ ಮಾಹಿತಿ ನೀಡಿದರು.
ಬಂಧಿತರು ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಮಲ್ಲಿಕಾರ್ಜುನ ನಾಗಪ್ಪ ಮಂಟೂರ (34), ಸದಾಶಿವ ರಾಚಪ್ಪ ಖೆಬ್ಬಾಣಿ, (20), ಹಣಮಂತ ಭೀಮಪ್ಪ ನೇಸೂರ (21) ಎಂದು ಗುರುತಿಸಲಾಗಿದೆ.
ಬಂಧಿತರು ಮಸಗುಪ್ಪಿ, ಖಿಳೆಗಾಂವ, ಗುಣದಾಳ, ಕಾಗವಾಡ, ನಂದಿ ಶುಗರ್ಸ್ ಹತ್ತಿರ, ಕೋಹಳ್ಳಿ, ಚಿಂಚಲಿ, ಮಹಾರಾಷ್ಟ್ರದ ಜತ್ತ, ಬಿಳ್ಳೂರು ಮುಂತಾದ ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದರು.
ಗ್ರಾಮೀಣ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಗಳನ್ನು ಕದಿಯುತ್ತಿದ್ದ ಮೂವರು ಆರೋಪಿಗಳನ್ನು ಜುಲೈ 16 ಬಂಧಿಸಿದ್ದಾರೆ. ಸೊನ್ನಗ್ರಾಮದ ವಿಠ್ಠಲ ಕಳ್ಳಿಮನಿ ಎಂಬುವರು ಕೊಣ್ಣೂರಿನ ಕರಿಸಿದ್ದೇಶ್ವರ ದೇವಸ್ಥಾನದ ಬಳಿ ನಿಲ್ಲಿಸಲಾಗಿದ್ದ ತಮ್ಮ ಬೈಕ್ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ದೂರುದಾಖಲಿಸಿಕೊಂಡು ಪೊಲೀಸರ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ.
ಈ ಬಗ್ಗೆ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್‌ಪಿ ಅಮರನಾಥ ರೆಡ್ಡಿ, ಎಎಸ್‌ಪಿ ಪ್ರಸನ್ನದೇಸಾಯಿ, ಡಿಎಸ್‌ಪಿ ಶಾಂತವೀರ, ಸಿಪಿಐ ಮಲ್ಲಪ್ಪ ಮಡ್ಡಿ ಮಾರ್ಗದರ್ಶನದಲ್ಲಿ ಗ್ರಾಮೀಣ ಪಿಎಸ್‌ಐ ಮಹೇಶ ಸಂಖ, ಅಪರಾಧ ವಿಭಾಗದ ಪಿಎಸ್‌ಐ ಎಚ್.ಎಂ. ಹೊಸಮನಿ, ಎಎಸ್‌ಐ ಬಿ.ಎಸ್.ಬಿರಾದಾರ, ಸಿಬ್ಬಂದಿಗಳಾದ ಬಿ.ಪಿ.ಕುಸನಾಳೆ, ಬಿ.ಎಂ. ಜಂಬಗಿ, ಎಸ್.ಎಸ್.ಮೇಟಿ, ಬಿ.ಎಸ್.ಮಾಳಿ, ಬಿ.ಬಿ.ವನಜೋಳ, ಸಿ.ಐ.ಪರೀಟ, ಎಸ್.ಎಸ್.ತುಪ್ಪದ, ಬಿ.ವೈ.ಪೇತೂನ್ನವರ, ಟಿ. ಆರ್.ಕೆಲೂಡಿ. ಎಲ್.ಎಸ್.ಲಾಯನ್ನವರ, ವಿ.ಎಸ್.ಜಾಧವ, ಮುತ್ತು ತಮದಡ್ಡಿ ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ. ತಂಡಕ್ಕೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದೆಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.