
ಜಮಖಂಡಿ: ನಗರದ ರಸ್ತೆಗಳ ಮೇಲೆ, ಚರಂಡಿ ಮೇಲೆ ಅನಧಿಕೃತವಾಗಿ ಮನೆಗಳ ತಡೆಗೋಡೆ, ಶೌಚಾಲಯ, ನೀರಿನ ಟ್ಯಾಂಕ್ ನಿರ್ಮಿಸಿಕೊಂಡವರು ತಾವೇ ತೆಗೆದುಕೊಳ್ಳಬೇಕು. ಒಂದು ವೇಳೆ ಅತಿಕ್ರಮಣ ಕಂಡು ಬಂದರೆ ನಗರಸಭೆಯಿಂದ ತೆರವುಗೊಳಿಸಲಾಗುವದು ಎಂದು ಪೌರಾಯುಕ್ತ ಜ್ಯೋತಿಗಿರೀಶ ಹೇಳಿದರು.
ನಗರದ ಝಮ್ ಝಮ್ ಕಾಲೋನಿಯಲ್ಲಿ ಚರಂಡಿಮೇಲೆ ಅನಧೀಕೃತವಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ನಗರಸಭೆ ಅಧಿಕಾರಿಗಳು ಬುಧವಾರ ಜೆಸಿಬಿ ಮೂಲಕ ತೆರವುಗೊಳಿಸಿ ಮಾತನಾಡಿದರು.
'ನಮ್ಮ ಕಚೇರಿಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಯಾರು ನಿಯಮ ಉಲ್ಲಂಘಿಸಿ ನಿರ್ಮಿಸಿಕೊಂಡಿರುವ ಮತ್ತು ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ಮತ್ತು ಅನುಮತಿ ಪಡೆಯದೆ ನಿರ್ಮಿಸಿಕೊಂಡಿರುವ ಎಲ್ಲ ಕಟ್ಟಡಗಳನ್ನು ತೆರುವುಗೊಳಿಸಲಾಗುವದು’ ಎಂದು ತಿಳಿಸಿದರು.
ನಗರ ಸೌಂದರ್ಯೀಕರಣಕ್ಕಾಗಿ ನಗರಸಭೆಯಿಂದ ವಿವಿಧ ಕಾಮಗಾರಿಗಳ ಯೋಜನೆ ಮಾಡಿಕೊಳ್ಳಲಾಗಿದೆ ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪರಿಸರ ಎಂಜಿನಿಯರ್ ಕುಸುಮಾ ಸೊಪ್ಪಡ್ಲ, ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ಆರೋಗ್ಯ ಅಧಿಕಾರಿಗಳಾದ ವಿನಾಯಕ ನಿಡೋಣಿ, ಸಚೀನ ಹಿರೇಮಠ, ಮಂಜುನಾಥ ಹಡಪದ, ಶ್ರೀಕಾಂತ ಘಾಟಗೆ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.