ADVERTISEMENT

ಕಾಡಸಿದ್ಧೇಶ್ವರ ಜಾತ್ರೆ: ಪ್ರಸಾದ ಸೇವಾ ಕಾರ್ಯಕ್ಕೆ15 ವರ್ಷ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 4:06 IST
Last Updated 10 ಸೆಪ್ಟೆಂಬರ್ 2025, 4:06 IST
ಬನಹಟ್ಟಿ ಕಾಡಸಿದ್ಧೇಶ್ವರ ಜಾತ್ರೆಯ ದಿನದಂದು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ರೊಟ್ಟಿ ಪ್ರಸಾದ ನಡೆಯಲಿದ್ದು, ಭಕ್ತರು ದಾಸೋಹ ಸಮಿತಿಯ ಸದಸ್ಯರಿಗೆ ರೊಟ್ಟಿ ನೀಡಿದರು.
ಬನಹಟ್ಟಿ ಕಾಡಸಿದ್ಧೇಶ್ವರ ಜಾತ್ರೆಯ ದಿನದಂದು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ರೊಟ್ಟಿ ಪ್ರಸಾದ ನಡೆಯಲಿದ್ದು, ಭಕ್ತರು ದಾಸೋಹ ಸಮಿತಿಯ ಸದಸ್ಯರಿಗೆ ರೊಟ್ಟಿ ನೀಡಿದರು.   

ರಬಕವಿ ಬನಹಟ್ಟಿ: ಇಲ್ಲಿನ ಕಾಡಸಿದ್ಧೇಶ್ವರ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಪ್ರಸಾದ ಸೇವಾ ಸಮಿತಿಯು ಹದಿನೈದು ವರ್ಷಗಳಿಂದ ಮೂರು ದಿನಗಳ ಕಾಲ ಪ್ರಸಾದ ಸೇವಾ ಕಾರ್ಯವನ್ನು ಮಾಡುತ್ತ ಬಂದಿದ್ದು, ಈ ಬಾರಿ ಇದೇ 16 ರಂದು ನಡೆಯುವ ಜಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ರೊಟ್ಟಿ ಪ್ರಸಾದ ವಿತರಣೆಯನ್ನು ಮಾಡಲಾಗುವುದು. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ರೊಟ್ಟಿಯನ್ನು ನೀಡುತ್ತಿದ್ದಾರೆ ಎಂದು ಪ್ರಸಾದ ಸೇವಾ ಸಮಿತಿಯ ಬ್ರಿಜ್ಮೋಹನ ಚಿಂಡಕ ತಿಳಿಸಿದರು.

ಅವರು ಸೋಮವಾರ ಸ್ಥಳೀಯ ಕಾಡಸಿದ್ದೇಶ್ವರ ದೇವಸ್ಥಾನದಲ್ಲಿ ಭಕ್ತರು ನೀಡಿದ ರೊಟ್ಟಿಯನ್ನು ಸ್ವೀಕರಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ರಬಕವಿ ಬನಹಟ್ಟಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮೀಣ ಭಾಗದ ಜನರು ರೊಟ್ಟಿಯನ್ನು ನೀಡಲು ಮುಂದಾಗಿದ್ದಾರೆ ಎಂದು ಚಿಂಡಕ ತಿಳಿಸಿದರು.

ADVERTISEMENT

ಪ್ರಸಾದ ಸೇವಾ ಸಮಿತಿಯ ಮತ್ತೊರ್ವ ಮುಖಂಡ ಗಿರೀಶ ಕಾಡದೇವರ ಮಾತನಾಡಿ, ಜಾತ್ರೆಯ ಮೂರು ದಿನಗಳಂದು ದೇವಸ್ಥಾನದ ಆವರಣದಲ್ಲಿ ಪ್ರತಿದಿನ ಮಧ್ಯಾಹ್ನ 15 ಸಾವಿರಕ್ಕಿಂತ ಹೆಚ್ಚು ಜನರಿಗೆ ಹುಗ್ಗಿ ಮತ್ತು ಕಿಚಡಿ ಪ್ರಸಾದವನ್ನು ವಿತರಣೆಯನ್ನು ಮಾಡಲಾಗುವುದು. ಪ್ರಸಾದ ಸೇವೆಗೆ ಭಕ್ತರು ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ ಎಂದರು.

ದುಂಡಯ್ಯ ಕಾಡದೇವರ, ನಿಜಗುಣಯ್ಯ ಕಾಡದೇವರ, ಶ್ರೀಶೈಲ ಅಥಣಿ, ಆನಂದ ಕಾಡದೇವರ, ಕಾಡಪ್ಪ ಬಾಬಾನಗರ, ಶ್ರೀಶೈಲ ಹೆಂಡಿ, ಶ‍್ರೀಶೈಲ ಕಾಡದೇವರ, ಶಿಖರೆಪ್ಪ ಮುಗತಿ ಸೇರಿದಂತೆ ಅನೇಕರು ಇದ್ದರು.

ಭಾರತ ಗ್ಯಾಸ್ ಸೇವಾ ಸಮಿತಿಯಿಂದ ಒಂದು ಸಾವಿರ ರೊಟ್ಟಿ: ರಬಕವಿ ಬನಹಟ್ಟಿ ಭಾರತ ಗ್ಯಾಸ್ ಸೇವಾ ಸಮಿತಿಯವರು ಒಂದು ಸಾವಿರ ರೊಟ್ಟಿಯನ್ನು ನೀಡಲಿದ್ದಾರೆ ಎಂದು ಶೇಖರ ಕೊಟ್ರಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.