ADVERTISEMENT

ಕನೇರಿ ಮಠಕ್ಕೆ ತೆರಳಿದ ಕಾಡಸಿದ್ದೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 4:54 IST
Last Updated 18 ಅಕ್ಟೋಬರ್ 2025, 4:54 IST

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿರುವ ಶಾಖಾ ಮಠದಲ್ಲಿದ್ದ ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಶನಿವಾರ ಬೆಳಿಗ್ಗೆ ಕನೇರಿಗೆ ತೆರಳಿದರು.

ಶುಕ್ರವಾರ ಮಠಕ್ಕೆ ಬಂದಿದ್ದ ಸ್ವಾಮೀಜಿಗೆ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಒಂದು ಗಂಟೆಯಲ್ಲಿ ಅಲ್ಲಿಂದ ಹೊರಡಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಆದೇಶ ಹೊರಡಿಸಿದ್ದರು.

ಆದೇಶದ ವಿಷಯ ತಿಳಿಸಲು ಹೋಗಿದ್ದ ಬೀಳಗಿ ತಹಶೀಲ್ದಾರ್ ವಿನೋದ ಅವರಿಗೆ, ಇಲ್ಲಿಂದ ಎಲ್ಲಿಗೂ ಹೋಗುವುದಿಲ್ಲ. ಜೈಲಿಗೆ ಕಳುಹಿಸುವುದಾದರೆ ಕಳುಹಿಸಿ ಎಂದಿದ್ದರು.

ADVERTISEMENT

ಬೆಳಿಗ್ಗೆ ಪೂಜೆ ‌ಮುಗಿಸಿಕೊಂಡು ಕನೇರಿಗೆ ಹೊರಟರು ಎಂದು ಮಠದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.