
ಹುನಗುಂದ: ‘ಇತಿಹಾಸದಲ್ಲಿ ಕನ್ನಡವು ಕೇವಲ ಭಾಷೆಯಾಗಿ ಮಾತ್ರವಲ್ಲ, ಸಂಸ್ಕೃತಿ, ಧರ್ಮ, ತತ್ವ, ಜೀವನ ಮೌಲ್ಯಗಳನ್ನು ಸಾರುವ ಶಕ್ತಿಯಾಗಿ ಬೆಳೆದು ಬಂದಿದೆ’ ಎಂದು ಚಿತ್ತರಗಿ ಸಂಸ್ಥಾನಮಠ ಇಳಕಲ್ ಗುರುಮಹಾಂತ ಸ್ವಾಮೀಜಿ ಹೇಳಿದರು.
ಬುಧವಾರ ಸ್ಥಳೀಯ ವಿ.ಎಂ ಎಸ್.ಆರ್.ವಸ್ತ್ರದ ಮಹಾವಿದ್ಯಾಲಯದ ಪ್ರಾಧ್ಯಾಪಕ ಶಿವಾನಂದ ನಾಗಣ್ಣವರ ಅವರ ಐದು ಸಂಶೋಧನಾ ಗ್ರಂಥಗಳ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವ ಸೋಮಲಿಂಗ ಗೆಣ್ಣೂರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇತಿಹಾಸ ಮತ್ತು ಸಾಹಿತ್ಯ ಪರಸ್ಪರ ಪೂರಕವಾಗಿವೆ. ಈ ಗ್ರಂಥಗಳು ಹೊಸ ಚಿಂತನೆ, ಗಂಭೀರ ಸಂಶೋಧನೆ ಮತ್ತು ಬೌದ್ಧಿಕ ಸಂವಾದಕ್ಕೆ ದಾರಿ ಮಾಡಿಕೊಡಲಿದೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಈರಣ್ಣ ಪತ್ತಾರ ಅವರು, ಎಸ್.ಆರ್.ನಾಗಣ್ಣವರ ಬರೆದ ಕರ್ನಾಟಕದಲ್ಲಿ ಶೈವಧರ್ಮದ ಬೆಳವಣಿಗೆ ಮತ್ತು ಶೈವಾವಲೋಕನ ಕೃತಿಗಳನ್ನು ಅವಲೋಕಿಸಿದರು.
ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿ ಮಾತನಾಡಿ, ಇತಿಹಾಸ ಮತ್ತು ಸಾಹಿತ್ಯವು ಸಮಾಜದ ಸಂಸ್ಕೃತಿ, ಮೌಲ್ಯಗಳು ಹಾಗೂ ಚಿಂತನೆಗಳನ್ನು ದಾಖಲಿಸುವ ಶಕ್ತಿಶಾಲಿ ಮಾಧ್ಯಮಗಳಾಗಿವೆ ಎಂದು ತಿಳಿಸಿದರು.
ಶಿರೂರು ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ವಿಜಯ ಮಹಾಂತೇಶ ವಿದ್ಯಾ ವರ್ಧಕ ಸಂಘದ ಗೌರವ ಕಾರ್ಯದರ್ಶಿ ಮಹಾಂತೇಶ ಕಡಪಟ್ಟಿ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ರು.ಮ.ಷಡಕ್ಷರಯ್ಯ, ನಿವೃತ್ತ ಪ್ರಾಧ್ಯಪಕ ಮಹೇಶ ತಿಪ್ಪಶೆಟ್ಟಿ, ಹುನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಎನ್.ವಿ.ಅಸ್ಕಿ, ಬನಹಟ್ಟಿಯ ಎಸ್.ಟಿ.ಸಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಮಂಜುನಾಥ ಬೆನ್ನೂರು, ಎಸ್.ಆರ್.ಗೋಲಗುಂಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.