ADVERTISEMENT

ಕಾರ್ಗಿಲ್ ಜ್ಯೋತಿ ರಥಯಾತ್ರೆ ನಾಳೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:42 IST
Last Updated 8 ಅಕ್ಟೋಬರ್ 2024, 14:42 IST

ಬಾದಾಮಿ: ‘ವಿರಕ್ತಮಠದಲ್ಲಿ ಪ್ರತಿವರ್ಷ ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತ ಬಂದಿದೆ. ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಚೊಳಚಗುಡ್ಡ ಗ್ರಾಮದ ಹುತಾತ್ಮ ವೀರಯೋಧ ಶಿವಬಸಯ್ಯ ಕುಲಕರ್ಣಿ ಅವರ ವೀರಸಮಾಧಿಯಿಂದ ಕಾರ್ಗಿಲ್ ಜ್ಯೋತಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ’ ಎಂದು ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಸ್ವಾಮೀಜಿ ಹೇಳಿದರು.

ಚೊಳಚಗುಡ್ಡ ಗ್ರಾಮದಲ್ಲಿ ಈಚೆಗೆ ಭೈರನಹಟ್ಟಿ ಗ್ರಾಮದ ವಿರಕ್ತ ಮಠದ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಗಿಲ್ ಜ್ಯೋತಿ ರಥಯಾತ್ರೆಯ ಪೂರ್ವಭಾವಿಸಭೆಯಲ್ಲಿ ಅವರು ಮಾತನಾಡಿದರು.

‘ಕಾರ್ಗಿಲ್ ಜ್ಯೋತಿ ರಥಯಾತ್ರೆ ಅ. 10ರಂದು ಬೆಳಿಗ್ಗೆ ಚೊಳಚಗುಡ್ಡ ಗ್ರಾಮದಿಂದ ನರಗುಂದ ತಾಲ್ಲೂಕಿನ ಭೈರನಹಟ್ಟಿ ವಿರಕ್ತ ಮಠದ ವರೆಗೆ ನಡೆಯಲಿದೆ. ಯುವಕರು ರಥಯಾತ್ರೆಯಲ್ಲಿ ಪಾಲ್ಗೊಂಡು ಸೈನಿಕರಿಗೆ ಗೌರವ ಸಲ್ಲಿಸಿ ಮತ್ತು ದೇಶಾಭಿಮಾನ ಬೆಳೆಸಿಕೊಳ್ಳಿ. ರಥಯಾತ್ರೆಯು ಚೊಳಚಗುಡ್ಡ, ಬಾದಾಮಿ, ಕುಳಗೇರಿ, ಗೋವನಕೊಪ್ಪ, ಕೊಣ್ಣೂರ ಮಾರ್ಗವಾಗಿ ಭೈರನಹಟ್ಟಿ ಗ್ರಾಮವನ್ನು ತಲುಪಲಿದೆ’ ಎಂದು ಭೈರನಹಟ್ಟಿ ಗ್ರಾಮದ ವಿರಕ್ತ ಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.

ADVERTISEMENT

ದೊರೆಸ್ವಾಮಿ ಪುಣ್ಯಸ್ಮರಣೋತ್ಸವ ಅಂಗವಾಗಿ ವಿರಕ್ತ ಮಠದಲ್ಲಿ ಅ. 10 ರಂದು ಬೆಳಿಗ್ಗೆ 10ಕ್ಕೆ ಭೈರನಹಟ್ಟಿ ಗ್ರಾಮದಲ್ಲಿ ಕಾರ್ಗಿಲ್ ಸೈನಿಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಆರ್.ಬಿ.ಚಿನಿವಾಲರ, ಸಂಗಪ್ಪ ಹೂಗಾರ, ಗುರಪ್ಪ ವಾಲಿ, ಶೇಖಪ್ಪ ಪಡಿಯಪ್ಪನವರ, ಎಂ.ಪಿ. ಧಾರವಾಡ, ಕಳಪಕ್ಕ ಹುಯಿಲಗೋಳ, ವೀರಣ್ಣ ಸಾತನ್ನವರ, ಮುತ್ತಣ್ಣ ಹುಂಬಿ, ಪ್ರಕಾಶ ಧನ್ನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.