ADVERTISEMENT

ಹುನಗುಂದ: ಕಾವೇರಿ ತಂತ್ರಾಂಶ 2.0: ಅಧಿಕಾರಿಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:24 IST
Last Updated 3 ಫೆಬ್ರುವರಿ 2026, 6:24 IST
ಹುನಗುಂದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಉಪನೋಂದಣಿ ಕಾರ್ಯಾಲಯದ ವತಿಯಿಂದ ಕಾಗದ ರಹಿತ ನೋಂದಣಿಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಾಗಾರ ನಡೆಯಿತು
ಹುನಗುಂದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಉಪನೋಂದಣಿ ಕಾರ್ಯಾಲಯದ ವತಿಯಿಂದ ಕಾಗದ ರಹಿತ ನೋಂದಣಿಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಾಗಾರ ನಡೆಯಿತು   

ಹುನಗುಂದ: ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಉಪ ನೋಂದಣಿ ಅಧಿಕಾರಿ ಎಸ್. ಡಿ. ನಾಗಠಾಣ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಉಪನೋಂದಣಿ ಕಾರ್ಯಾಲಯದ ವತಿಯಿಂದ ಸೋಮವಾರ ಹಮ್ಮಿಕೊಂಡ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕಾವೇರಿ ತಂತ್ರಾಂಶ 2.0 ಅನ್ನು ಸರಳೀಕರಿಸಲಾಗಿದೆ. ಜನಸ್ನೇಹಿ ಮಾಡಲಾಗಿದೆ. ಇದರ ಸಮರ್ಪಕ ಅನುಷ್ಠಾನಕ್ಕಾಗಿ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ADVERTISEMENT

ಇಳಕಲ್ ಉಪ ನೋಂದಣಿ ಅಧಿಕಾರಿ ಎಂ.ಉಮೇಶ ಮಾತನಾಡಿ, ನೋಂದಣಿ ಸಮಯದಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ತರಬೇತಿ ಆಯೋಜಿಸಲಾಗಿದೆ. ನೋಂದಣಿಗೆ ಸಂಬಂಧಿಸಿದ ಡಾಕ್ಯುಮೆಂಟ್ಸ್ ಗಳು (ದಾಖಲೆಗಳು) ಡಿಜಿ ಲಾಕರ್‌ನಲ್ಲಿ ಲಭ್ಯವಿರುತ್ತವೆ. ಹೊಸ ತಾಂತ್ರಿಕ ವ್ಯವಸ್ಥೆಯಿಂದ ಅವುಗಳನ್ನು ಸಹ ನಾವು ಪಡೆದು ಕೊಳ್ಳಬಹುದಾಗಿದೆ ಎಂದರು.

ಎಂಜಿನಿಯರ್‌ಗಳಾದ ದೇವೇಂದ್ರ ಸುತಾರ್ ಹಾಗೂ ಗಿರೀಶ್ ಮೊರೆ ತರಬೇತಿ ನೀಡಿದರು.

ಹುನಗುಂದ ಮತ್ತು ಇಳಕಲ್ ನಗರದ ದಸ್ತಾವೇಜು ಬರಗಾರರು, ವಕೀಲರು, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರದ ಪ್ರತಿನಿಧಿಗಳು ಕಾರ್ಯಾಲಯದ ಸಿಬ್ಬಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಹುನಗುಂದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಉಪನೋಂದಣಿ ಕಾರ್ಯಾಲಯದ ವತಿಯಿಂದ ಕಾಗದ ರಹಿತ ನೋಂದಣಿಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಾಗಾರ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.