ಕೆರೂರ: ಪಟ್ಟಣದಲ್ಲಿ ಶನಿವಾರ ಸಂಜೆ ನಿರಂತರವಾಗಿ ಸುರಿದ ಮಳೆಗೆ 4 ಮನೆಗಳಿಗೆ ಹಾನಿಯಾಗಿವೆ.
ಹೊಸಪೇಟಿ ಬಡಾವಣೆಯ ತಾನಪ್ಪ ಸೂಳಿಕೇರಿ, ಶಶಿಕಲಾ ರಾಮದುರ್ಗ, ಕಡಿವಾಲದ ಅವರ ಮನೆಗಳು ಕುಸಿದು ಬಿದ್ದಿವೆ. ಇನ್ನೂ ಕೆಲವು ಕಡೆ ಮನೆಗಳು ಸೋರುತ್ತಿವೆ. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಸಮೀಪದ ಹೊಸಕೋಟಿ ಗ್ರಾಮದಲ್ಲಿ ಶನಿವಾರ ಸುರಿದ ಮಳೆ ಗ್ರಾಮದ ಯಲ್ಲಪ್ಪ ಅಣ್ಣಿಗೇರಿ, ಯಮನವ್ವ ಅಣ್ಣಿಗೇರಿ ಅವರು ಮನೆಯಲ್ಲಿ ಮಳೆಯ ನೀರು ಸಂಗ್ರಹವಾಗಿ ಹಾನಿಯಾಗಿದೆ. ತಾತ್ಕಾಲಿಕವಾಗಿ ಎರಡು ಕುಟುಂಬಗಳನ್ನು ಗ್ರಾಮದ ಶಾಲೆಗೆ ಸ್ಥಳಾಂತರಿಸಲಾಗಿದೆ. ತಾಲ್ಲೂಕು ಆಡಳಿತ ವತಿಯಿಂದ ಗ್ರಾಮದ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಕೆರೂರ ಹೋಬಳಿಯ ಕಂದಾಯ ನಿರೀಕ್ಷಕ ಆನಂದ ಭಾವಿಮಠ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.