ರಾಂಪುರ: ಚಿಟಿ ಚಿಟಿ ಮಳೆಯಲ್ಲೂ ಕುಗ್ಗದ ಸಂಭ್ರಮ, ಯುವಕರು ತಲೆಯ ಮೇಲೆ ಕಿಚಡಿಯ ಗಡಿಗೆ ಹೊತ್ತು ಸಾಗಿ ಬರುವ ಮೂಲಕ ಆಷಾಢಪರ್ವ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಿದರು.
ಬೆನಕಟ್ಟಿಯಲ್ಲಿ ಶುಕ್ರವಾರ ಸಂಜೆ ಜರುಗಿದ ಈ ಕಾರ್ಯಕ್ರಮ ರೈತರ ಶ್ರದ್ಧಾ-ಭಕ್ತಿಗೆ ಸಾಕ್ಷಿಯಾಗಿತ್ತು. ಊರ ಹೊರವಲಯದ ಎಂಕಂಚೆಪ್ಪನ ದೇವಸ್ಥಾನದ ಎದುರಿನ ಕಟ್ಟೆಯ ಮೇಲೆ ತಾವು ತಂದಿದ್ದ ಜೋಳದ ಕಿಚಡಿಯನ್ನು ರಾಶಿಯಾಗಿ ಹಾಕಿದರು.
ಯಾವುದೇ ಭೇದ-ಭಾವವಿಲ್ಲದೇ ಎಲ್ಲರೂ ತಂದಿದ್ದ ಕಿಚಡಿಯನ್ನು ಸೇರಿಸಿ ದೇವರಿಗೆ ನೈವೇದ್ಯ ಸಮರ್ಪಿಸಲಾಯಿತು. ನಂತರ ಹಿರಿಯರು, ಯುವಕರು, ಮಹಿಳೆಯರು, ಮಕ್ಕಳು ಕಿಚಡಿ ಹಾಗೂ ಮಜ್ಜಿಗೆಯ ಸಾರು ಸವಿದರು. ರೈತರು ಮನೆಯಿಂದ ತಂದಿದ್ದ ಸಾರನ್ನು ದೈವದ ವತಿಯಿಂದ ತಯಾರಿಸಲಾಗಿದ್ದ ಸಾರಿನ ಜೊತೆ ಬೆರೆಸಿದರು. ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಈ ವಿಶಿಷ್ಟ ಬಗೆಯ ಆಷಾಢಪರ್ವ ಕಾರ್ಯಕ್ರಮ ಗ್ರಾಮದ ಜನರ ಭಾವೈಕ್ಯತೆಗೂ ಸಾಕ್ಷಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.