ADVERTISEMENT

ಕೊಲೆ ಯತ್ನ: 2 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 14:45 IST
Last Updated 2 ಆಗಸ್ಟ್ 2024, 14:45 IST

ಬಾಗಲಕೋಟೆ: ಕೊಲೆಗೆ ಯತ್ನಿಸಿದ ಇಬ್ಬರು ಅಪರಾಧಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎನ್‌.ವಿ.ವಿಜಯ್‌ ಎರಡು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಅಂಕಲಗಿಯ ರಂಗಮಂದಿರ ಬಳಿ ಸಿದ್ದಪ್ಪ ಹೊಸುರ ಎಂಬುವವವರನ್ನು ದೇವನಾಳದ ಲಕ್ಷ್ಮಣ ಮೂಲಿಮನಿ, ಶ್ರೀಶೈಲ ಮೂಲಿಮನಿ ಕಾಲಿನಿಂದ ಒದ್ದು, ತಲೆಗೆ ಹೊಡೆದು ಗಾಯಪಡಿಸಿ ಕೊಲೆ ಮಾಡಲು ಯತ್ನಿಸಿದ್ದರು ಎಂದು ಸಾವಿತ್ರಿ ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಾಕ್ಷಿಗಳನ್ನು ಸಂಗ್ರಹಿಸಿ ಕಲಾದಗಿ ಠಾಣೆಯ ಪಿಎಸ್‌ಐ ಆಗಿದ್ದ ರವಿ ಪವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ ಜೈಲು ಶಿಕ್ಷ ಜತೆಗೆ ₹12 ಸಾವಿರ ದಂಡ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಪ್ರಧಾನ ಅಭಿಯೋಜಕ ವಿ.ಜಿ. ಹೆಬಸೂರ ವಾದ ಮಂಡಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.