
ಬಾಗಲಕೋಟೆ: ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರ ರಾಣಿ, ಕನ್ನಡ ಮಣ್ಣಿನ ವೀರ ಮಹಿಳೆ ಕಿತ್ತೂರ ಚನ್ನಮ್ಮನ ಶೌರ್ಯ ಎಂದೆಂದಿಗೂ ಸ್ಮರಣೀಯವಾಗಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಶಿವಾನಂದ ಜಿನ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಿತ್ತೂರ ಚನ್ನಮ್ಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜನರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಬೀಜಗಳನ್ನು ಬಿತ್ತಿದ ಪ್ರಮುಖ ಮಹಿಳೆಯರಲ್ಲಿ ಕಿತ್ತೂರು ರಾಣಿ ಚನ್ನಮ್ಮ ಕೂಡ ಒಬ್ಬರು ಎಂದರು.
ಚನ್ನಮ್ಮ ಜನರು ಸ್ವತಂತ್ರರಾಗಿರಬೇಕು ಮತ್ತು ಸ್ವಾಭಿಮಾನದಿಂದ ತಮ್ಮ ಜೀವನ ನಡೆಸಬೇಕು ಎಂದು ಬಯಸಿದ್ದರು, ಅವರ ಹೋರಾಟದ ಜೀವನ ಎಲ್ಲರಿಗೂ ಆದರ್ಶ ಎಂದರು.
ಮುಖಂಡ ಶಿವಾನಂದ ಟವಳಿ ಕಿತ್ತೂರ ಚನ್ನಮ್ಮನ ಜೀವನ ಚರಿತ್ರೆ ವಿವರಿಸಿದರು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಉಪಾಧ್ಯಕ್ಷೆ ಶೋಭಾರಾವ್, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಶ್ರೀಧರ ನಾಗರಬೆಟ್ಟ, ಗುಂಡುರಾವ್ ಶಿಂಧೆ, ರವಿ ಪಟ್ಟಣದ, ಶಂಕರ ಅರಷಿಣಗುಡಿ, ಸಂತೋಷ ಜಕಾತಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.