ಗುಳೇದಗುಡ್ಡ: ಪಟ್ಟಣದ ಲಕ್ಷ್ಮಿ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹1.51ಕೋಟಿ ಲಾಭವಾಗಿದೆ’ ಎಂದು ಬ್ಯಾಂಕಿನ ಚೇರ್‌ಮನ್ ರಾಜಶೇಖರ ಶೀಲವಂತ ಹೇಳಿದರು.
ಪಟ್ಟಣದ ಕರನಂದಿಯವರ ಶಿವಕೃಪಾ ರಂಗಮಂದಿರದಲ್ಲಿ ಶನಿವಾರ ನಡೆದ ಲಕ್ಷ್ಮಿ ಸಹಕಾರ ಬ್ಯಾಂಕಿನ 110ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಹಕರಿಗೆ ಯುಪಿಐ ಸೇವೆ ಸೌಲಭ್ಯ ಲೋಕಾರ್ಪಣೆ ಮಾಡಿದ್ದೇವೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನದ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ’ ಎಂದರು.
ವಾರ್ಷಿಕ ಸಭೆಯಲ್ಲಿ ಪಟ್ಟಣ ವಿವಿಧ ಪತ್ತಿನ ಸಹಕಾರಿ ಅಧ್ಯಕ್ಷರು, ಮುಖ್ಯಕಾರ್ಯನಿರ್ವಾಹಕರು ಹಾಗೂ ಲಕ್ಷ್ಮೀ ಬ್ಯಾಂಕಿನ ಎಲ್ಲ ಶಾಖೆಗಳಿಗೆ ಒಬ್ಬರಂತೆ ಸದಸ್ಯರನ್ನು, ಉತ್ತಮ ಗ್ರಾಹಕರನ್ನು, ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಹಾಗೂ ಪದವಿಯಲ್ಲಿ ಹೆಚ್ಚಿನ ಅಂಕ ಪಡೆದ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ನಗದು ಸಹಿತ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ವಾರ್ಷಿಕ ಸಭೆಯಲ್ಲಿ ಉಪಾಧ್ಯಕ್ಷ ಸಂಪತ್‍ಕುಮಾರ ರಾಠಿ, ನಿರ್ದೇಶಕರಾದ ಮುರುಗೇಶ ರಾಜನಾಳ, ಕಮಲಕಿಶೋರ ಮಾಲಪಾಣಿ, ಸಂಜಯ ಕಾರಕೂನ, ಗಣೇಶ ಶೀಲವಂತ, ಪರಶುರಾಮ ಪವಾರ, ರವೀಂದ್ರ ಅಲದಿ, ಪ್ರಭು ತಟ್ಟಿಮಠ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.