ಕೆರೂರ: ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ತಡವಾಗಿ ಬಂದ ತಹಶೀಲ್ದಾರ್ ಹಾಗೂ ಗ್ರಾಮ ಆಡಳಿತ ಅಧಿಕಾರಿಗೆ ಶಾಸಕ ಜೆ.ಟಿ. ಪಾಟೀಲ ತರಾಟೆಗೆ ತಗೆದುಕೊಂಡ ಘಟನೆ ಮಂಗಳವಾರ ನಡೆಯಿತು.
ಸಮೀಪದ ಜಲಗೇರಿ ತಾಂಡ ಹಮ್ಮಿಕೊಂಡಿದ್ದ ಕೃಷ್ಣಾಪೂರ ಹಾಗೂ ಚಂದಾಪೂರ ಗ್ರಾಮಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ತಡವಾಗಿ ಬಂದ ಅಧಿಕಾರಿಗಳನ್ನು ಶಾಸಕರು ತೆಗೆದುಕೊಂಡರು.
ಒಟ್ಟು 327 ಜನರಿಗೆ ಹಕ್ಕು ಪತ್ರ ವಿತರಿಸಬೇಕಾಗಿತ್ತು. ಆದರೆ ಅಧಿಕಾರಿಗಳು 222 ಜನರಿಗೆ ಮಾತ್ರ ಹಕ್ಕು ಪತ್ರ ವಿತರಣೆ ಮಾಡಿರುವುದಕ್ಕೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಮ ಆಡಳಿತ ಅಧಿಕಾರಿ ಸುರೇಶ ಹವಾಲ್ದಾರ ಮಾತನಾಡಿ, ಕೆಲವೊಂದು ಕುಟುಂಬದವರು ಮರಣ ಹೊಂದಿದ್ದಾರೆ. ಅವರದು ವಾರಸಾ ಮಾಡಬೇಕು. ಹೀಗಾಗಿ ಕೆಲವು ಬಾಕಿ ಉಳಿದಿವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜೆ.ಟಿ. ಪಾಟೀಲ, ವಾರಸಾ ಮಾಡುವುದು ಯಾರ ಕೆಲಸ? ಬೇಗನೇ ಮಾಡಿಸಿಕೊಡಿ ಎಂದು ತರಾಟೆಗೆ ತೆಗೆದುಕೊಂಡರು. ಪಕ್ಕದಲ್ಲಿದ್ದ ತಹಶಿಲ್ದಾರ್ ಕಾವ್ಯಶ್ರೀ ಅವರಿಗೂ ಎಚ್ಚರಿಕೆ ನೀಡಿದರು.
‘ನನ್ನ ಮತಕ್ಷೇತ್ರದ ಪ್ರತಿಯೊಂದು ಗ್ರಾಮವು ಪೋಡಿ ಮುಕ್ತ ಗ್ರಾಮವಾಗಬೇಕು’ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
‘ಒಂದು ವಾರದಲ್ಲಿ ಬಾಕಿ ಉಳಿದ ಹಕ್ಕುಪತ್ರಗಳನ್ನು ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ನೀರಬೂದಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ಯಾಮವ್ವ ಹೂಲಗೇರಿ, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ಪಮ್ಮಾರ, ಗೋಪಾಲ ಸರದೇಸಾಯಿ, ಗಿರೀಶ ನಾಡಗೌಡ, ಅನಿಲ ದಡ್ಡಿ, ಪ್ರವೀಣ ಚಿಕ್ಕೂರ, ಅಶೋಕ ನಾಯಕ್, ಶಂಕರ ರಾಠೋಡ, ತಾಲ್ಲೂಕು ಪಂಚಾಯಿತಿ ಇ.ಒ ಸುರೇಶ ಕೋಕರೆ, ಉಪತಹಶೀಲ್ದಾರ್ ವೀರೇಶ ಬಡಿಗೇರ, ಕಂದಾಯ ನಿರೀಕ್ಷ ಆನಂದ ಭಾವಿಮಠ, ಪಿಡಿಒ ಚೇತನ ಹೊಸಮನಿ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.