ADVERTISEMENT

ಜೀವನದಲ್ಲಿ ನೀತಿ, ಧರ್ಮದಿಂದ ನಡೆಯಿರಿ: ರೇವಣಸಿದ್ದ ಪಟ್ಟದೇವರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 4:14 IST
Last Updated 26 ಸೆಪ್ಟೆಂಬರ್ 2025, 4:14 IST
ಮಹಾಲಿಂಗಪುರದ ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ಎರಡನೇ ದಿನವಾದ ಬುಧವಾರ ಹಮ್ಮಿಕೊಂಡಿದ್ದ ಶ್ರೀದೇವಿ ಪುರಾಣ ಕಾರ್ಯಕ್ರಮದಲ್ಲಿ ಅಭಿನವ ರೇವಣಸಿದ್ಧ ಪಟ್ಟದೇವರು ಮಾತನಾಡಿದರು
ಮಹಾಲಿಂಗಪುರದ ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ಎರಡನೇ ದಿನವಾದ ಬುಧವಾರ ಹಮ್ಮಿಕೊಂಡಿದ್ದ ಶ್ರೀದೇವಿ ಪುರಾಣ ಕಾರ್ಯಕ್ರಮದಲ್ಲಿ ಅಭಿನವ ರೇವಣಸಿದ್ಧ ಪಟ್ಟದೇವರು ಮಾತನಾಡಿದರು   

ಮಹಾಲಿಂಗಪುರ: ‘ಶ್ರೀದೇವಿ ಪುರಾಣ ಕೇಳುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಸಿರಿ-ಸಂಪತ್ತು ಅಧಿಕವಾಗುತ್ತದೆ’ ಎಂದು ಸೊಲ್ಲಾಪುರದ ಮೈಂದರಗಿಯ ಗುರುಹಿರೇಮಠದ ಅಭಿನವ ರೇವಣಸಿದ್ದ ಪಟ್ಟದೇವರು ಹೇಳಿದರು.

ಪಟ್ಟಣದ ಬನಶಂಕರಿದೇವಿ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘದಿಂದ ನವರಾತ್ರಿ ಮೂರನೇ ದಿನವಾದ ಬುಧವಾರ ಹಮ್ಮಿಕೊಂಡಿದ್ದ ಶ್ರೀದೇವಿ ಪುರಾಣದ ಪ್ರವಚನ ನೀಡಿ ಮಾತನಾಡಿದರು.

‘ಜೀವನದಲ್ಲಿ ನೀತಿ, ಧರ್ಮ, ಆಚಾರ, ವಿಚಾರದಿಂದ ನಡೆಯದಿದ್ದರೆ ಕಷ್ಟ ಬರುತ್ತದೆ. ಪರಮಾತ್ಮನ ಚಿಂತನೆ ಮಾಡಿದರೆ ಮುಕ್ತಿ ದೊರೆಯುತ್ತದೆ’ ಎಂದರು.

ADVERTISEMENT

ವಿಶ್ವಕರ್ಮ, ಭಗೀರಥ ಹಾಗೂ ಹರಳಯ್ಯ ಸಮಾಜದ ಮುಖಂಡರು ಶ್ರೀಗಳನ್ನು ಸನ್ಮಾನಿಸಿದರು. ಶ್ರೀಕಾಂತ ನಾಯಿಕ ಗಾಯನ ಹಾಗೂ ಹಾರ್ಮೋನಿಯಂ, ಹಣಮಂತ ಅಂಕದ ತಬಲಾ ಸಾಥ್ ನೀಡಿದರು. ಈಶ್ವರಪ್ಪ ವಂದಾಲ ಸನ್ಮಾನಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಪುರಾಣದ ನಂತರ ನಡೆದ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಶರಣು ಯಮನೂರ ಹಾಸ್ಯ ಹಾಗೂ ರಾಜು ಮುದ್ದೇಬಿಹಾಳ ಜಾದೂ ಪ್ರದರ್ಶನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.