ADVERTISEMENT

ಗಮನ ಸೆಳೆದ 25 ಅಡಿ ಎತ್ತರದ ಶಿವನ ಮೂರ್ತಿ 

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:11 IST
Last Updated 8 ಮಾರ್ಚ್ 2024, 16:11 IST
ಇಳಕಲ್‌ನ ಚವ್ಹಾಣ ಬಡಾವಣೆಯಲ್ಲಿ ಸಿದ್ದಿ ವಿನಾಯಕ ದೇವಸ್ಥಾನದ ಮೇಲೆ ನಿರ್ಮಾಣಗೊಂಡಿರುವ 25 ಅಡಿ ಎತ್ತರದ  ಶಿವನ ಮೂರ್ತಿ
ಇಳಕಲ್‌ನ ಚವ್ಹಾಣ ಬಡಾವಣೆಯಲ್ಲಿ ಸಿದ್ದಿ ವಿನಾಯಕ ದೇವಸ್ಥಾನದ ಮೇಲೆ ನಿರ್ಮಾಣಗೊಂಡಿರುವ 25 ಅಡಿ ಎತ್ತರದ  ಶಿವನ ಮೂರ್ತಿ    

ಇಳಕಲ್‌: ನಗರದ ಚವ್ಹಾಣ ಬಡಾವಣೆಯಲ್ಲಿ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ 25 ಅಡಿ ಎತ್ತರದ ಶಿವನ ಮತ್ತು 12 ಅಡಿ ಎತ್ತರದ ನಂದಿ ಮೂರ್ತಿಗಳು ನಗರದ ಜನರ ಗಮನ ಸೆಳೆದಿವೆ.

ಈ ಬೃಹತ್‌ ಮೂರ್ತಿಗಳು ಶುಕ್ರವಾರ ಲೋಕಾರ್ಪಣೆಗೊಂಡವು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ 10 ಅರ್ಚಕರ ತಂಡದಿಂದ ಬೃಹತ್‌ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನಡೆಯಿತು ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಟೇಶ ಪೋತಾ ಹೇಳಿದರು.

ಜಿಲ್ಲೆಯಲ್ಲೇ ಅತಿ ಎತ್ತರದ ಶಿವನ ಮೂರ್ತಿ ಇದಾಗಿದ್ದು, ಸಾವಿರಾರು ಜನರು ಸರದಿಯಲ್ಲಿ ನಿಂತು ದರ್ಶನ ಪಡೆದರು.

ADVERTISEMENT

ಜ್ಯೋತಿರ್ಲಿಂಗಗಳ ಮೆರವಣಿಗೆ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಇಳಕಲ್‌ ಶಾಖೆಯಿಂದ ಶಿವರಾತ್ರಿ ಅಂಗವಾಗಿ 12 ಜ್ಯೋತಿರ್ಲಿಂಗಗಳ ಪ್ರತಿಕೃತಿಗಳ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿದರು.
ನಗರಸಭೆ ಹತ್ತಿರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಟ್ಟಡದಿಂದ ಆರಂಭವಾದ ಮೆರವಣಿಗೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು. ಶಿವಕುಮಾರ ಮತ್ತು ವೈಭವ ಕೋರೆ ಬಾಲ ಶಿವನ ಪಾತ್ರದಲ್ಲಿ ಮಿಂಚಿದರು.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ನಗರದ ಬಸವೇಶ್ವರ ದೇವಸ್ಥಾನ, ಕಿಲ್ಲಾದ ಮಲ್ಲಿಕಾರ್ಜುನ ದೇವಸ್ಥಾನ, ಶಂಕರಲಿಂಗ ದೇವಸ್ಥಾನ, ಸಾಲೇಶ್ವರ ದೇವಸ್ಥಾನ, ಬನ್ನಿಕಟ್ಟಿಯ ನೀಲಕಂಠೇಶ್ವರ ದೇವಸ್ಥಾನ, ಮಾರ್ಕಂಡೇಶ್ವರ ದೇವಸ್ಥಾನ, ಕೆಇಬಿ ಈಶ್ವರ ದೇವಸ್ಥಾನಗಳಲ್ಲಿ ಶಿವರಾತ್ರಿ ಪ್ರಯಕ್ತ ಶುಕ್ರವಾರ ಶಿವಲಿಂಗಕ್ಕೆ ಮಹಾಭಿಷೇಕ, ಪೂಜೆ ನಡೆದವು.

ಇಳಕಲ್‌ನ ಈಶ್ವರ ಗುಡಿಯಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ಇಳಕಲ್‌ನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಿಂದ ಶಿವರಾತ್ರಿ ಅಂಗವಾಗಿ 12 ಜ್ಯೋತಿರ್ಲಿಂಗಗಳ ಪ್ರತಿಕೃತಿಗಳ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.