ADVERTISEMENT

ಮಹಾಲಿಂಗಪುರ | ಸಮುದಾಯ ಭವನಕ್ಕೆ ಅನುದಾನ ಮಂಜೂರು

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 3:37 IST
Last Updated 15 ಜನವರಿ 2026, 3:37 IST
ಮಹಾಲಿಂಗಪುರದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದು‌ ಕೊಣ್ಣೂರ ಅವರನ್ನು ಜಂಗಮ ಸಮಾಜ ವತಿಯಿಂದ ಸನ್ಮಾನಿಸಲಾಯಿತು
ಮಹಾಲಿಂಗಪುರದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದು‌ ಕೊಣ್ಣೂರ ಅವರನ್ನು ಜಂಗಮ ಸಮಾಜ ವತಿಯಿಂದ ಸನ್ಮಾನಿಸಲಾಯಿತು   

ಮಹಾಲಿಂಗಪುರ: ಪಟ್ಟಣದ ಜಂಗಮ ಸಮಾಜದ ರೇಣುಕಾಚಾರ್ಯ ಸಮುದಾಯ ಭವನದ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆಯಿಂದ ₹ 1 ಕೋಟಿ ಅನುದಾನ ಮಂಜೂರಾಗಿದೆ.

ಅನುದಾನ ಬಿಡುಗಡೆ ಮಾಡಿಸಿದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರನ್ನು ಪಟ್ಟಣದ ಜಂಗಮ ಸಮಾಜದ ಹಿರಿಯರು ಬರಗಿ ಗಲ್ಲಿಯ ಸಮಾಜದ ಕಾರ್ಯಾಲಯದಲ್ಲಿ ಮಂಗಳವಾರ ಸನ್ಮಾನಿಸಿದರು.

ಜಂಗಮ ಸಮಾಜದ ಅಧ್ಯಕ್ಷ ಗುರುಪಾದಯ್ಯ ಛಟ್ಟಿಮಠ, ವಿರುಪಾಕ್ಷಯ್ಯ ಪಂಚಕಟ್ಟಿಮಠ, ಬಸಯ್ಯ ಛಟ್ಟಿಮಠ, ಜಿ.ಎಸ್.ಮಠಪತಿ, ಬಿ.ಎಂ.ಅಯ್ಯನಗೌಡರ, ಮಹಾಂತೇಶ ಹಿಟ್ಟಿನಮಠ, ಸಾಗರ ಮಠದ, ಮಹಾಂತೇಶ ಮನ್ನಯ್ಯನವರಮಠ, ಎಸ್.ಟಿ.ಮಠಪತಿ, ಎಂ.ಎಸ್.ಮನ್ನಯ್ಯನವರಮಠ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಹಾಲಿಂಗ ಮಾಳಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.