
ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣದ ಎರಡನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರವೀಣ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಣ ಶಿರೋಳ ಅವಿರೋಧವಾಗಿ ಆಯ್ಕೆಯಾದರು.
ಅ.23ರಂದು ನಡೆದ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರವೀಣ ಪಾಟೀಲ, ಭೀಮನಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಶಿರೋಳ ನಾಮಪತ್ರ ಸಲ್ಲಿಸಿದ್ದರು. ಆದರೆ, ಯಾವುದೇ ಸದಸ್ಯರು ಸಭೆಗೆ ಹಾಜರಾಗದ ಕಾರಣ ಕೋರಂ ಆಗಿರಲಿಲ್ಲ. ಮುಂದೂಡಿದ್ದ ಚುನಾವಣೆಯನ್ನು ಅ.30ರಂದು ನಡೆಸಿದಾಗಲೂ ಸಭೆ ಜರುಗಿಸದೆ ರದ್ದುಗೊಳಿಸಿ, ನ.16ರಂದು ನಡೆಸಲು ನಿರ್ಧರಿಸಲಾಗಿತ್ತು.
ಸಂಘದ ಕಾರ್ಯಾಲಯದಲ್ಲಿ ಭಾನುವಾರ ನಡೆದ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭೀಮನಗೌಡ ಪಾಟೀಲ ನಾಮಪತ್ರ ಹಿಂಪಡೆದರು. ಚುನಾವಣಾಧಿಕಾರಿ ಪಿ.ವಿ.ಜಮಾದಾರ ಕಾರ್ಯನಿರ್ವಹಿಸಿದರು.
ನಿರ್ದೇಶಕರಾಗಿ ಭೀಮನಗೌಡ ಪಾಟೀಲ, ರಂಗಪ್ಪ ಒಂಟಗೋಡಿ, ರಾಮನಗೌಡ ಪಾಟೀಲ, ಮಂಜು ಮುಗಳಖೋಡ, ಪಾಂಡು ಸೈದಾಪುರ, ಸುಮಿತಾ ಕುಡಚಿ, ಲಕ್ಷ್ಮೀ ದಂಡಿನ, ಹರಳಯ್ಯ ಮಲಾವಡಿ, ಜಗದೀಶ ಮಾಳಗಿ, ಭೀಮರಾವ ಕಾಳವ್ವಗೋಳ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.