ADVERTISEMENT

ಕೆರೂರ: ಕುರಿ ಕಳ್ಳರನ್ನು ಹಿಡಿಯಲು ಹೋದ ವ್ಯಕ್ತಿ ಕೊಲೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 3:56 IST
Last Updated 10 ಮಾರ್ಚ್ 2025, 3:56 IST
<div class="paragraphs"><p>ಶರಣಪ್ಪ ಜಮ್ಮನಕಟ್ಟಿ</p></div>

ಶರಣಪ್ಪ ಜಮ್ಮನಕಟ್ಟಿ

   

ಕೆರೂರ: ಹಳಗೇರಿ ಗ್ರಾಮದ ಟೋಲನಾಕಾ ಹತ್ತಿರ ಉಗಲವಾಟ ಗ್ರಾಮದ ವ್ಯಕ್ತಿಯೊಬ್ಬರನ್ನು ಭಾನುವಾರ ರಾತ್ರಿ ಕಲ್ಲು, ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ.

ಶರಣಪ್ಪ ಜಮ್ಮನಕಟ್ಟಿ (23) ಕೊಲೆಯಾದ ವ್ಯಕ್ತಿ.

ADVERTISEMENT

ಕೊಲೆ ಮಾಡಿದ ಉಗಲವಾಟ ಗ್ರಾಮದ ಆರೋಪಿಗಳಾದ ಯಾಕುಬ್ ಅಗಸಿಮನಿ, ಸಲ್ಮಾನ ಕರೆಮನ್ಸೂರ, ಸಚಿನ್ ಭಜಂತ್ರಿ ಅನ್ನು ಪೋಲೀಸರು ಬಂಧಿಸಿದ್ದಾರೆ.

ಆರೋಪಿಗಳು ಮೃತ ವ್ಯಕ್ತಿ ಶರಣಪ್ಪ ಅವರ ದಡ್ಡಿಯಲ್ಲಿರುವ ಕುರಿಗಳನ್ನು ಕಳ್ಳತನ ಮಾಡಲು ಬಂದಿದ್ದರು.

ಆರೋಪಿ ಯಾಕುಬ್ ಅಗಸಿಮನಿಯನ್ನು ಶರಣಪ್ಪ ಹಿಡಿದುಕೊಂಡರು. ಆಗ ತಪ್ಪಿಸಿಕೊಳ್ಳಲು ಆರೋಪಿಗಳೆಲ್ಲರೂ ಸೇರಿ, ಕಲ್ಲು, ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.