ADVERTISEMENT

ಮಾರುತೇಶ್ವರ ನೀರೋಕಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 13:27 IST
Last Updated 27 ಏಪ್ರಿಲ್ 2025, 13:27 IST
ರಬಕವಿ–ಬನಹಟ್ಟಿ ಸಮೀಪದ ಯಲ್ಲಟ್ಟಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡ ನೀರೋಕಳಿ ಹೊಂಡಕ್ಕೆ ಅರ್ಚಕರು ಮತ್ತು ಮಹಿಳೆಯರು ಪೂಜೆ ಸಲ್ಲಿಸಿದರು
ರಬಕವಿ–ಬನಹಟ್ಟಿ ಸಮೀಪದ ಯಲ್ಲಟ್ಟಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡ ನೀರೋಕಳಿ ಹೊಂಡಕ್ಕೆ ಅರ್ಚಕರು ಮತ್ತು ಮಹಿಳೆಯರು ಪೂಜೆ ಸಲ್ಲಿಸಿದರು   

ರಬಕವಿ–ಬನಹಟ್ಟಿ: ಸಮೀಪದ ಯಲ್ಲಟ್ಟಿ ಗ್ರಾಮದ ಮಾರುತೇಶ್ವರ ಜಾತ್ರೆಯ ಅಂಗವಾಗಿ ಮೂರು ದಿನಗಳ ಕಾಲ ನಡೆಯುವ ಓಕಳಿ ಕಾರ್ಯಕ್ರಮಕ್ಕೆ ಗ್ರಾಮದ ಮಾರುತೇಶ್ವರ ದೇವಸ್ಥಾನದ ಅರ್ಚಕರು, ಹಿರಿಯರು ಮತ್ತು ಮಹಿಳೆಯರು ಶನಿವಾರ ಪೂಜೆ ಸಲ್ಲಿಸಿದರು.

ನಂತರ ಗ್ರಾಮದಲ್ಲಿ ಮೊದಲ ದಿನದ ನೀರೋಕಳಿಯನ್ನು ನೂರಾರು ಜನರು ವೀಕ್ಷಣೆ ಮಾಡಿ ಸಂತಸಪಟ್ಟರು. ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕ ಮಕ್ಕಳು ಮತ್ತು ಹಿರಿಯರು ಕೂಡಾ ಭಾಗವಹಿಸಿದ್ದರು.

ಎರಡು ದಿನಗಳ ಕಾಲ ನೀರೋಕಳಿ ನಡೆಯಲಿದ್ದು, ಮೂರನೆಯ ದಿನದಂದು ಹಾಲೋಕಳಿಯ ಅಂಗವಾಗಿ ಹಾಲಗಂಬ ಹತ್ತುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ADVERTISEMENT

ರಾಚಯ್ಯ ಹಿರೇಮಠ, ಮಹಾದೇವ ಮೋಪಗಾರ, ಶಂಕರ ಮಗದುಮ್, ಶಿವನಗೌಡ ಪಾಟೀಲ, ಸೋಮನಿಂಗ ನಾಯಕ, ಸಂಜು ಮಾಳಗೌಡ, ಸಿದ್ದಪ್ಪ ಮಧುರಖಂಡಿ, ಸತ್ಯಪ್ಪ ಮನಗೂಳಿ, ಬಾಬು ಮುದಕನ್ನವರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.