ಕುಳಗೇರಿ ಕ್ರಾಸ್: ಸಮೀಪದ ನೀಲಗುಂದ ಗ್ರಾಮದಲ್ಲಿ ಶಿವಪ್ಪಯ್ಯನವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಸೋಮವಾರ ಪುರಾಣ ಮಹಾಮಂಗಲ ಹಾಗೂ 16 ಜೋಡಿ ಸಾಮೂಹಿಕ ವಿವಾಹ ನಡೆಯಿತು.
ನರಸಾಪುರ ಹಿರೇಮಠದ ಮರುಳಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹಾಗೂ ಸೋಮನಕೊಪ್ಪ ಗ್ರಾಮದ ಪೂರ್ಣಾನಂದ ಮಠದ ಶಿವಲೋಹಿತ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹಗಳು ನಡೆದವು.
ಗ್ರಾಮದಲ್ಲಿ ಪುರಾಣ ಮಹಾಮಂಗಲದ ಅಂಗವಾಗಿ ಶಿವಪ್ಪಯ್ಯನವರ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆ ನಡೆಯಿತು.
ಶಿವಯೋಗಿಶ್ವರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎನ್.ಡಿ.ದೊಡ್ಡನಿಂಗಪ್ಪನವರ, ಕುಮಾರಸ್ವಾಮಿ ಶಿವಪ್ಪಯ್ಯನಮಠ, ಕೃಷ್ಣರಾವ್ ದೇಸಾಯಿ ಹಾಗೂ ಗ್ರಾಮದ ಪ್ರಮುಖ ಹಿರಿಯರು ಹಾಗೂ ಯುವಕ ಮಿತ್ರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.