ಬೀಳಗಿ: ತಾಲ್ಲೂಕಿನ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಹಕ್ಕು ಪತ್ರ, ರೆಷನ್ ಕಾರ್ಡ್ ಮುಂತಾದ ಸೌಲಭ್ಯಗಳ ಕುರಿತು ಪರೀಶಿಲಿಸಲು ತಹಶೀಲ್ದಾರ್, ಇಒ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಶಾಸಕ ಜೆ.ಟಿ.ಪಾಟೀಲ ಸೂಚಿಸಿದರು.
ತಾಲ್ಲೂಕಿನ ಸುನಗ ಗ್ರಾಮದಲ್ಲಿ ಗುರುವಾರ ನಡೆದ ಸುನಗ ಎಲ್.ಟಿ1,ಎಲ್.ಟಿ.2, ಕುಂದರಗಿ ಎಲ್.ಟಿ ಗ್ರಾಮಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.
ತಾಂಡಾಗಳ ಯುವಕರು ದುಷ್ಚಟಗಳಿಂದ ದೂರವಿದ್ದು ಉತ್ತಮವಾದ ಶಿಕ್ಷಣ ಪಡೆದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಲಹೆ ನೀಡಿದರು.
ನನ್ನ ಅಧಿಕಾರವಧಿಯ ಉಳಿದ ಮೂರು ವರ್ಷಗಳಲ್ಲಿ ಪ್ರತಿಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲೇ ಬಗೆಹರಿಸಲು ಪ್ರಯತ್ನಿಸುವೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇನ್ನು ಮುಂದೆ ಕೌನ್ಸಿಲಿಂಗ ಮುಖಾಂತರ ವರ್ಗಾವಣೆಯಾಗುತ್ತೆವೆ. ಶಾಸಕರ ನಿಯಂತ್ರಣವಿಲ್ಲ ಎಂದು ಕೊಳ್ಳಬೇಡಿ ನಿಮ್ಮ ಕಾರ್ಯವೈಖರಿಯನ್ನು ಪ್ರತಿಕ್ಷಣವೂ ಗಮನಿಸುತ್ತಿರುತ್ತೇನೆ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಂದು ಪಿಡಿಒ ಡಿ.ಆರ್.ಅಡವಿ ಅವರಿಗೆ ಕಿವಿಮಾತು ಹೇಳಿದರು.
ತಹಶೀಲ್ದಾರ್ ವಿನೋದ ಹತ್ತಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಕ್ಕು ಪತ್ರಗಳನ್ನು ಸುರಕ್ಷಿತವಾಗಿ ಹಾಗೂ ಜಾಗರೂಕತೆಯಿಂದ ಇಟ್ಟುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿ ಕುಂದರಗಿ ಎಲ್.ಟಿ 1. ಗ್ರಾಮದ 202 ಹಾಗೂ ಸುನಗ ಎಲ್.ಟಿ.1,2 ಸೇರಿ 704 ಒಟ್ಟು 906 ಹಕ್ಕು ಪತ್ರಗಳನ್ನು ವಿತರಿಸಿದರು.
ಗ್ರಾಮದ ಮುಖಂಡ ಶಂಕರ ಕಾರಬಾರಿ ಮಾತನಾಡಿ, ಇಲ್ಲಿಯವರೆಗೆ ತಾಂಡಾಗಳಿಗೆ ಯಾವುದೇ ದಾಖಲಾತಿಗಳಿರಲಿಲ್ಲ. ಶಾಸಕರ ಮುತುವರ್ಜಿಯಿಂದ ಸರ್ಕಾರ ಹಕ್ಕುಪತ್ರ ವಿತರಿಸಿದ್ದು ಸಂತಸವುಂಟು ಮಾಡಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ದಳವಾಯಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ರಸೂಲ್ ಮುಜಾವರ, ಸಂಗಪ್ಪ ಕಂದಗಲ್ಲ, ಸಿದ್ದಪ್ಪ ದಳವಾಯಿ, ಕುಮಾರ ಲಮಾಣಿ, ರವಿ ಲಮಾಣಿ, ನಾರಾಯಣ ಲಮಾಣಿ ಮಂಜುನಾಥ ಧರೆಗೊಂಡ, ಪಿಡಿಒ ಡಿ.ಆರ್.ಅಡವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.