ವಿಜಯಪುರ: ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ₹ 7,96,94,063 ಮೊತ್ತದ ಸಾಲಗಾರ ಎಂದು ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿವಿವರದಲ್ಲಿ ತಿಳಿಸಿದ್ದಾರೆ. ಅಲ್ಲದೇ, ಇವರ ಪತ್ನಿ ರೇಣುಕಾ ಅವರು ₹ 1,84,78,665 ಮೊತ್ತದ ಸಾಲಗಾರರಾಗಿದ್ದಾರೆ!
ಬೈಕ್ ಷೋರೂಂ ಮಾಲೀಕರಾಗಿದ್ದರೂ ಸಹ ಸ್ವಂತ ಬಳಕೆಗೆ ಕಾರು, ಬೈಕ್ ಸೇರಿದಂತೆ ಯಾವುದೇ ವಾಹನವಿಲ್ಲ ಎಂದು ತಿಳಿಸಿದ್ದಾರೆ!
ಸುನೀಲಗೌಡ ಅವರ ಬಳಿ ₹ 1.15 ಲಕ್ಷ ನಗದು, 102 ತೊಲೆ ಬಂಗಾರ, ವಿವಿಧ ಬ್ಯಾಂಕ್ ಅಕೌಂಟ್, ಮ್ಯೂಚುವಲ್ ಫಂಡ್, ಷೇರು, ವಿಮೆ ಸೇರಿದಂತೆ ಒಟ್ಟು ₹ 12,51,05,280 ಮೊತ್ತದ ಚರಾಸ್ತಿ ಹಾಗೂ ವಾಣಿಜ್ಯ ಕಟ್ಟಡಗಳು, ಕೃಷಿ ಭೂಮಿ, ಕೃಷಿಯೇತರ ಭೂಮಿ, ನಿವೇಶನ, ವಸತಿ ಕಟ್ಟಡಗಳು ಸೇರಿದಂತೆ ₹ 13,93,05,340 ಮೊತ್ತದ ಸ್ಥಿರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಪತ್ನಿ ರೇಣುಕಾ ಅವರ ಬಳಿ ₹ 1ಲಕ್ಷ ನಗದು, 130 ತೊಲ ಬಂಗಾರದ ಆಭರಣ, ವಿವಿಧ ಬ್ಯಾಂಕ್ ಅಕೌಂಟ್, ಮ್ಯೂಚುವಲ್ ಫಂಡ್, ಷೇರು, ವಿಮೆ ಸೇರಿದಂತೆ ಒಟ್ಟು ₹ 2,18,15,184 ಮೊತ್ತದ ಚರಾಸ್ತಿ ಹಾಗೂ ವಾಣಿಜ್ಯ ಕಟ್ಟಡಗಳು, ಕೃಷಿ ಭೂಮಿ, ಕೃಷಿಯೇತರ ಭೂಮಿ, ನಿವೇಶನ, ವಸತಿ ಕಟ್ಟಡಗಳು ಸೇರಿದಂತೆ ₹5,91,70,550 ಮೊತ್ತದ ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ.
ಪುತ್ರಿ ಸಾನ್ವಿ ಬಳಿ ₹ 8.05 ಲಕ್ಷ ಮೌಲ್ಯದ ಸ್ಥಿರಾಸ್ತಿ ಹಾಗೂ ಪುತ್ರ ಸಿದ್ದಾಂತ ಬಳಿ ₹ 4.98 ಲಕ್ಷ ಮೊತ್ತದ ಸ್ಥಿರಾಸ್ತಿ ಇರುವುದಾಗಿ ಘೋಷಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.