ADVERTISEMENT

ಬಾಗಲಕೋಟೆ: ಪಶು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದ ಮಂಗ

​ಪ್ರಜಾವಾಣಿ ವಾರ್ತೆ
Published 22 ಮೇ 2025, 20:37 IST
Last Updated 22 ಮೇ 2025, 20:37 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬಾಗಲಕೋಟೆ: ಗಾಯಗೊಂಡಿದ್ದ ಮಂಗವೊಂದು ಜಿಲ್ಲೆಯ ಗುಡೂರು ಪಶು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಗಾಯಗೊಂಡಿದ್ದ ಮಂಗವು ಗುಡೂರಿನ ಪಶು ಆಸ್ಪತ್ರೆ ಮುಂದೆ ಡಾ.ಜಿ.ಜಿ. ಬಿಲ್ಲೋರ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಬಂದು ಕೂತಿತ್ತು. ಆಗ ಅಲ್ಲಿಗೆ ಬಂದ ಡಾ.ಬಿಲ್ಲೋರ ಅವರಿಗೆ ಗಾಯವಾಗಿದ್ದ ಸ್ಥಳವನ್ನು ತೋರಿಸಿತು. ಏನಾಗಿದೆ ಎಂದು ನೋಡಿದಾಗ ಗಾಯವಾಗಿರುವುದು, ಕಂಡು ಬಂದಿತು.

ADVERTISEMENT

ಗಾಯಕ್ಕೆ ಡಾ.ಬಿಲ್ಲೋರ ಚಿಕಿತ್ಸೆ ನೀಡಿದ ನಂತರ ಮಂಗ ಮರಳಿದೆ. ‘ನನ್ನ ದ್ವಿಚಕ್ರ ವಾಹನದ ಮೇಲೆ ಕೂತಿದ್ದ ಮಂಗವು ಗಾಯ ಆಗಿರುವುದನ್ನು ತೋರಿಸಿತು. ಚಿಕಿತ್ಸೆ ನೀಡಿದ ನಂತರ ಮರಳಿದೆ. ಯಾವುದೇ ಸಮಸ್ಯೆ ಮಾಡಲಿಲ್ಲ’ ಎಂದು ಡಾ.ಬಿಲ್ಲೋರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.