ADVERTISEMENT

ಮುಧೋಳ | ಅಕ್ರಮ ಚಟುವಟಿಕೆಗೆ ಮಟ್ಟಹಾಕಿ: ಸಚಿವ ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 5:54 IST
Last Updated 1 ಅಕ್ಟೋಬರ್ 2025, 5:54 IST
ಮುಧೋಳದಲ್ಲಿ ಮಂಗಳವಾರ ಪೊಲೀಸ್ ಇಲಾಖೆಗೆ ನಾಲ್ಕು ವಾಹನವನ್ನು ಹಸ್ತಾಂತರಿಸಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿದರು
ಮುಧೋಳದಲ್ಲಿ ಮಂಗಳವಾರ ಪೊಲೀಸ್ ಇಲಾಖೆಗೆ ನಾಲ್ಕು ವಾಹನವನ್ನು ಹಸ್ತಾಂತರಿಸಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿದರು   

ಮುಧೋಳ: ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಸಮರ್ಥವಾಗಿ ಕೆಲಸಮಾಡುತ್ತಿದೆ. ಅಕ್ರಮ ಚಟುವಟಿಕೆ ಮಾಡುವ ಸಮಾಜಘಾತುಕರನ್ನು ಯಾವುದೇ ಮೂಲಾಜ ಇಲ್ಲದೆ ನಿರ್ಧಾಕ್ಷಿಣ್ಯವಾಗಿ ಸೇದೆಬಡಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಗಣಿ ಮತ್ತು ಭೂವಿಜ್ಞಾನದ ಅನುದಾನದಲ್ಲಿ ಮಂಗಳವಾರ ನಾಲ್ಕು ನೂತನ ವಾಹನವನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಯುವ ಜನಾಂಗ, ವಿದ್ಯಾರ್ಥಿಗಳು ಮಾದಕವಸ್ತುಗಳ ಸೇವನೆಯಿಂದ ಜೀವನ ಹಾಳುಮಾಡುಕೊಳ್ಳುತ್ತಿದ್ದಾರೆ. ಅಂತವರನ್ನು ಸೇದೆಬಡಿಯಬೇಕು ಮಾದಕವಸ್ತು ಸೇವನೆ ಮುಕ್ತವಾಗಿಸಬೇಕು. ಕಳ್ಳತನವನ್ನು ತಡೆಯಲು ಗಸ್ತು ಚುರುಕುಗೊಳಿಸಿ ಪ್ರತಿ ಸೂಕ್ಷ್ಮ ಅಗತ್ಯ ಇರುವ ರಸ್ತೆಗಳಲ್ಲಿ ಸಿ.ಸಿಟಿವಿ ಕ್ಯಾಮೇರಾ ಹಾಕಲು ಯೋಜನೆ ರೂಪಿಸಲು ಹೇಳಿದರು.

ಬಾಗಲಕೋಟೆ ಜಿಲ್ಲಾ ಎಸ್‍ಪಿ ಸಿದ್ಧಾರ್ಥ ಗೋಯಲ್ ಮಾತನಾಡಿ, ಜಿಲ್ಲೆಗೆ ನಾನು ಹೊಸಬನಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರ ತ್ವರಿತ ಸ್ಪಂದನೆಯಿಂದ ಇಲಾಖೆಯನ್ನು ಸಮರ್ಥವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯ್ತಿ ಸಿಇಒ ಶಶಿಧರ ಕುರೇರ, ಎಸಿ ಸ್ವೇತಾ ಬೀಡಿಕರ, ಎಡಿಶನಲ್ ಎಸ್‍ಪಿ ಪ್ರಸನ್ನ ದೇಸಾಯಿ, ಡಿಎಸ್‍ಪಿ ಸೈಯದ್ ರೋಶನ್ ಜಮೀರ, ಸಿಪಿಐ ಮಹಾದೇವ ಶಿರಹಟ್ಟಿ ಪಿಎಸ್‍ಐ ಅಜೀತರಡ್ಡಿ ಹೊಸಮನಿ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ, ಅಶೋಕ ಕಿವಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.