ಬಾಗಲಕೋಟೆ: ಎಲ್ಲ ಧರ್ಮಗಳಿಂತ ರಾಷ್ಟ್ರಧರ್ಮ ಮುಖ್ಯವಾಗಿದ್ದು, ದೇಶಕ್ಕಾಗಿ ವೀರ ಬಲಿದಾನಗೈದ ಅನೇಕ ವೀರರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬ್ರಿಗೇಡಿಯರ್ ಸುಧೀಂದ್ರ ಇಟ್ನಾಳ ಹೇಳಿದರು.
ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲಿ ಶನಿವಾರ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ‘ಕಾರ್ಗಿಲ್ ಕದನ-ಕಥನ ಹಾಗೂ ಆಪರೇಷನ್ ಸಿಂಧೂರ’ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಇತಿಹಾಸದ ಘಟನೆಗಳ ಅರಿವು ಮುಖ್ಯವಾಗಿದೆ. ಭಾರತೀಯ ಸೇನೆಯಲ್ಲಿ ನಿಸ್ವಾರ್ಥ ಸೇವೆ ಮುಖ್ಯವಾಗಿದೆ ಎಂದರು.
ಮುಖ್ಯ ಭಾಷಣಕಾರ ನಂದು ಗಾಯಕವಾಡ ಮಾತನಾಡಿ, ದೇಶದ ಸೈನಿಕರಿಗೆ ಆತ್ಮಶಕ್ತಿ ತುಂಬುವ, ತಂದೆ–ತಾಯಿಗೆ ಉತ್ತಮ ಮಕ್ಕಳಾಗುವ ಸಂಕಲ್ಪ ಮಾಡೋಣ ಎಂದರು.
ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಭಾರತದ ಸೇನೆ ಜಗತ್ತಿನಲ್ಲಿಯೇ ಅತಿದೊಡ್ಡ ಬಲಶಾಲಿ ಸೇನೆಯಾಗಿದೆ. ಭಾರತೀಯರ ಕಣ ಕಣದಲ್ಲೂ ನಿಷ್ಕಲ್ಮಷವಾದ ದೇಶಭಕ್ತಿ ಅಡಗಿದೆ. ಯುವ ಪೀಳಿಗೆಯಲ್ಲಿ ರಾಷ್ಟ್ರಧರ್ಮದ ಪರಿಕಲ್ಪನೆ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುಂಚೆ ವಿದ್ಯಾಗಿರಿ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ವೃತ್ತದಿಂದ ನೇತಾಜಿ ಹಾಸ್ಟೆಲ್ ಮಾರ್ಗವಾಗಿ ಸಭಾಭವನದವರೆಗೆ ರಾಷ್ಟಧ್ವಜದ ಮೆರವಣಿಗೆ ಮಾಡಲಾಯಿತು.
ಮಹಾಂತೇಶ ಶೆಟ್ಟರ, ರಾಜು ರೇವಣಕರ, ಬಸವರಾಜ ಯಂಕಂಚಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಸವಿತಾ ಲೆಂಕೆನ್ನವರ, ಶೋಭಾ ರಾವ್, ಜ್ಯೋತಿ ಭಜಂತ್ರಿ, ಭ್ಯಾಗ್ಯಶ್ರೀ ಹಂಡಿ, ಸುರೇಶ ಮಜ್ಜಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.