ರಬಕವಿ ಬನಹಟ್ಟಿ: ನವರಾತ್ರಿ ಉತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಉತ್ತಮ ಚಿಂತನೆಗಳನ್ನು, ವಿಚಾರ ಮತ್ತು ನಡತೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಇಂದ್ರೀಯಗಳನ್ನು ಹತೋಟೆಯಲ್ಲಿಟ್ಟುಕೊಳ್ಳುವುದರ ಮೂಲಕ ತಮ್ಮ ಬದುಕನ್ನು ಬಂಗಾರವನ್ನಾಗಿಸಿಕೊಳ್ಳಬೇಕು ಎಂದು ಕಲಬುರಗಿಯ ಮಾತೋಶ್ರೀ ವೇದಮಯಿ ಅಮ್ಮನವರು ತಿಳಿಸಿದರು.
ಸ್ಥಳೀಯ ಅಕ್ಕಲಕೋಟ ಶರಣರು ಸ್ಥಾಪಿಸಿದ ಸಿದ್ಧಾರೂಢ ಮಠದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ದೇವಿ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮಲ್ಲಿರುವ ದ್ವೇಷ ದೂರು ಮಾಡಿಕೊಳ್ಳಬೇಕು. ಮತ್ತೊಬ್ಬರನ್ನು ಕ್ಷಮಿಸುವ ಗುಣ ನಮ್ಮದಾಗಬೇಕು. ಮತ್ತೊಬ್ಬರ ಏಳ್ಗೆಯ ಕುರಿತು ನಾವು ಹೆಮ್ಮೆ ಪಡಬೇಕು. ಇದು ನಮ್ಮ ದೊಡ್ಡತ ತೋರಿಸುತ್ತದೆ. ನವರಾತ್ರಿ ಉತ್ಸವದಲ್ಲಿ ದೇವಿಯ ಪೂಜೆಯಿಂದ ನಾವು ಜೀವನದಲ್ಲಿ ನೆಮ್ಮದಿ ಕಾಣುತ್ತೇವೆ ಎಂದು ತಿಳಿಸಿದರು.
ಬುದ್ನಿ ಶರಣರು, ಮಹಾಲಿಂಗಪ್ಪ ಶೀಲವಂತ, ದಾನಪ್ಪ ಕೊಣ್ಣೂರ, ರಮೇಶ ಕೊಣ್ಣೂರ, ರಮೇಶ ಸುಲ್ತಾನಪುರ, ಮಲ್ಲು ಕಿತ್ತೂರ, ಡಾ.ಸೋಮನಾಥ ಬಡೇಮಿ, ರವಿ ಕೊಣ್ಣೂರ, ಮಹಾನಂದ ಕುಳ್ಳಿ, ಶೈಲಜಾ ನುಚ್ಚಿಮ ಮಹಾದೇವಿ ಗಸ್ತಿ, ಮಹಾದೇವಿ ಸುಟ್ಟಟ್ಟಿ, ಡಾ.ಕಾವೇರಿ ಹಳ್ಯಾಳ, ಪಾರ್ವತಿ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.