ADVERTISEMENT

ಸಾರಿಗೆ ಸಿಬ್ಬಂದಿಗೆ ಮಾಸ್ಕ್ ಸಿಗುತ್ತಿಲ್ಲ !

ಚಾಲಕರು, ನಿರ್ವಾಹಕರಿಗೆ ವಿಜಯಪುರದಿಂದ ಸೋಮವಾರ ಪೂರೈಕೆ ನಿರೀಕ್ಷೆ

ವೆಂಕಟೇಶ್ ಜಿ.ಎಚ್
Published 15 ಮಾರ್ಚ್ 2020, 19:30 IST
Last Updated 15 ಮಾರ್ಚ್ 2020, 19:30 IST
ಬಾಗಲಕೋಟೆ ಬಸ್ ಡಿಪೊದಲ್ಲಿ ಭಾನುವಾರ ವಾಯವ್ಯ ಸಾರಿಗೆ ಸಂಸ್ಥೆ ಐಷಾರಾಮಿ ಬಸ್‌ಗಳನ್ನು ಸ್ಯಾನಿಟೈಸೇಶನ್‌ಗೆ ಒಳಪಡಿಸಲಾಯಿತು
ಬಾಗಲಕೋಟೆ ಬಸ್ ಡಿಪೊದಲ್ಲಿ ಭಾನುವಾರ ವಾಯವ್ಯ ಸಾರಿಗೆ ಸಂಸ್ಥೆ ಐಷಾರಾಮಿ ಬಸ್‌ಗಳನ್ನು ಸ್ಯಾನಿಟೈಸೇಶನ್‌ಗೆ ಒಳಪಡಿಸಲಾಯಿತು   

ಬಾಗಲಕೋಟೆ: ಮೆಡಿಕಲ್ ಶಾಪ್, ಫಾರ್ಮಾಗಳಲ್ಲಿ ಹಣ ಕೊಡುತ್ತೇವೆ ಎಂದರೂ ಮಾಸ್ಕ್ ಸಿಗುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರಿಗೆ ಭಾನುವಾರ ಮಾಸ್ಕ್ ಪೂರೈಸಲು ಕೊಡಲು ಸಾಧ್ಯವಾಗಿಲ್ಲ.

ಬಸ್‌ಗಳ ಸಂಚರಿಸುವ ಹಾಗೂ ಪ್ರಯಾಣಿಕರೊಂದಿಗೆ ಮುಖಾಮುಖಿಯಾಗುವ ಎಲ್ಲ ಸಿಬ್ಬಂದಿಗೂ ಮಾಸ್ಕ್ ಕೊಡಿಸುವಂತೆ ಹುಬ್ಬಳ್ಳಿಯ ವಾಯವ್ಯ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ ತನ್ನ ಎಲ್ಲಾ ಎಂಟು ವಿಭಾಗೀಯ ಕಚೇರಿಗಳಿಗೂ ಶನಿವಾರ ಸುತ್ತೋಲೆ ಕಳುಹಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಮಾಸ್ಕ್ ಲಭ್ಯವಾಗದೇ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಮಾಸ್ಕ್ ಖರೀದಿ ಬಾಗಲಕೋಟೆಯಲ್ಲಿ ಪ್ರಯತ್ನಿಸಿದೆವು. ಜಿಲ್ಲಾ ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿದ್ದೆವು. ಹುಬ್ಬಳ್ಳಿಗೂ ಸಿಬ್ಬಂದಿಯೊಬ್ಬರನ್ನು ಕಳಿಸಿದ್ದೆವು. ಎಲ್ಲಿಯೂ ಸಿಕ್ಕಿಲ್ಲ. ನಮಗೆ ತುರ್ತಾಗಿ 2000 ಮಾಸ್ಕ್‌ಗಳು ಬೇಕಿವೆ. ವಿಜಯಪುರದಲ್ಲಿ ಒಂದು ಕಡೆ ಸಿಗುತ್ತಿರುವ ಮಾಹಿತಿ ಸಿಕ್ಕಿದ್ದು, ಅಲ್ಲಿ ಸಂಪರ್ಕಿಸಿದ್ದೇವೆ. ಸೋಮವಾರ ಪೂರೈಕೆ ಆಗಲಿವೆ ಎಂದು ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮಣ್ಣವರ ’ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.