ಅಮೀನಗಡ: ಗೃಹಲಕ್ಷ್ಮೀ ಯೋಜನೆಯ ಅರ್ಜಿಗೆ ಸಂಬಂಧಿಸಿದಂತೆ ಲಾಗಿನ್ ಐಡಿ ದುರ್ಬಳಕೆ ಕುರಿತು ಸಮೀಪದ ಐಹೊಳೆ ಗ್ರಾಪಂ ಡಿಇಒಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಐಹೊಳೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಎಚ್.ಎಂ.ಮಠದ ಅವರ ವಿರುದ್ಧ ಸಾರ್ವಜನಿಕರು ಮೌಖಿಕ ದೂರು ನೀಡಿದ್ದರು.
‘ಐಹೊಳೆ ಗ್ರಾಮ ಪಂಚಾಯಿತಿಯ ಗೃಹಲಕ್ಷ್ಮೀ ಯೋಜನೆಯ ಲಾಗಿನ್ ಐಡಿ ಬಳಸಿಕೊಂಡು ಗುಡೂರ (ಎಸ್‌ಸಿ) ಗ್ರಾಮದಲ್ಲಿ ಯೋಜನೆಯ ನೋಂದಣಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ 2 ದಿನದಲ್ಲಿ ಈ ಕುರಿತು ವಿವರಣೆ ನೀಡಬೇಕು. ತಪ್ಪಿದ್ದಲ್ಲಿ ಸೂಕ್ತ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ಪಿಡಿಒ ಮಹಾಂತೇಶ ಗೋಡಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.