ADVERTISEMENT

ಪಂಚಮಸಾಲಿ ನಾಲ್ಕನೇ ಪೀಠ ಶೀಘ್ರ: ಬಸವಜಯ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 23:21 IST
Last Updated 2 ಅಕ್ಟೋಬರ್ 2025, 23:21 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ರಬಕವಿ ಬನಹಟ್ಟಿ (ಬಾಗಲಕೋಟೆ ಜಿಲ್ಲೆ): ‘ಜಿಲ್ಲೆಯ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಚಾಟಿಸಿದರೂ ನಾನು ದೃತಿಗೆಟ್ಟಿಲ್ಲ. ಕೂಡಲಸಂಗಮದಲ್ಲೇ ಪಂಚಮಸಾಲಿ ನಾಲ್ಕನೇ ಪೀಠ ಶೀಘ್ರವೇ ಸ್ಥಾಪಿಸಲಾಗುವುದು’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

‘ರಾಜ್ಯಮಟ್ಟದ ಪಂಚಮಸಾಲಿ ಬೃಹತ್ ಸಭೆಯನ್ನು ಶಾಸಕರಾದ ಸಿ.ಸಿ.ಪಾಟೀಲ, ಸಿದ್ದು ಸವದಿ ಮತ್ತು ಪ್ರಮುಖರ ಸಮ್ಮುಖದಲ್ಲಿ ಮಾಡಲಾಗುವುದು. ಇದಕ್ಕೆ ಪೂರಕವಾಗಿ ಕಾರ್ಯಗಳು ನಡೆದಿವೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ನಾನು ಪಂಚಮಸಾಲಿ ಸಮಾಜಕ್ಕೆ ಮತ್ತು ಮೂಲಪೀಠಕ್ಕೆ ಯಾವುದೆ ಅನ್ಯಾಯ ಮಾಡಿಲ್ಲ. ನನ್ನ ಆರಂಭವು ಕೂಡಲ ಸಂಗಮದಿಂದ ಆರಂಭವಾಗಿದ್ದು, ಅಂತ್ಯವು ಇಲ್ಲಿಯೇ ಆಗಲಿ. ನಾನು ಭಕ್ತರಿಂದ ಪೀಠಾಧೀಶ ಆಗಿರುವೆ. ಭಕ್ತರ ನಿರ್ಣಯವೇ ಅಂತಿಮ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.